ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ (Muttappa Rai) ಪುತ್ರ ರಿಕ್ಕಿ ರೈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈಗ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈಗೂ ಬಿಡದಿ ಪೊಲೀಸರು (Bidadi Police) ನೋಟಿಸ್ ನೀಡಿದ್ದಾರೆ.
ರಿಕ್ಕಿ ರೈ (Ricky Rai) ಹೇಳಿಕೆ ದಾಖಲಿಸಿಕೊಂಡಿರುವ ಪೊಲೀರು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದು ಖುದ್ದು ಠಾಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ಬುಧವಾರ ನೋಟಿಸ್ ನೀಡಿದ್ದಾರೆ.
2 ಆಪರೇಷನ್ಗಳಿಗೆ ಒಳಗಾಗಿದ್ದ ರಿಕ್ಕಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಂಧಿತ ಗನ್ಮ್ಯಾನ್ ವಿಠ್ಠಲ್ ಫೈರಿಂಗ್ ಮಾಡಿರುವ ಶಂಕೆ ಇದ್ದು, ಘಟನೆಗೆ ಸಂಬಂಧಿಸಿದಂತೆ ವಿಠ್ಠಲ್ ಯಾವುದೇ ಸತ್ಯ ಬಾಯ್ಬಿಡುತ್ತಿಲ್ಲ. ಹೀಗಾಗಿ ರಿಕ್ಕಿ ರೈ ಹಾಗೂ ಆರೋಪಿ ವಿಠ್ಠಲ್ ಮುಖಾಮುಖಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.