ಬೆಂಗಳೂರು : ದೀಪಾವಳಿ ಹಬ್ಬಕ್ಕಿಂತ ಮೊದಲೇ ಸಿಲಿಕಾನ್ ಸಿಟಿಯಲ್ಲಿ ಪಟಾಕಿ ಸದ್ದು ಮಾಡ್ತಿದೆ. ಪಟಾಕಿ ಶೇಖರಿಸಿ ಇಟ್ಟಿದ್ದ ಗೋಡೌನ್ ಮೇಲೆ ಕುಂಬಳಗೋಡು ಪೊಲೀಸರು ದಾಳಿ ನಡೆಸಿದ್ದು, ಶ್ರೀನಿವಾಸ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.

ದಾಳಿ ವೇಳೆ ಸುಮಾರು 10 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ ಪಡೆದಿದ್ದಾರೆ. ಪಟಾಕಿ ಮಾರಾಟಗಾರರು ಈಗಷ್ಟೇ ಲೈಸನ್ಸ್ಗಾಗಿ ಅರ್ಜಿ ಸಲ್ಲಿಸಿದ್ದು, ಲೈಸನ್ಸ್ ಸಿಗುವ ಮೊದಲೇ ಗೋಡೌನ್ನಲ್ಲಿ ಪಟಾಕಿ ಸಂಗ್ರಹಿಸಿದ್ದಾರೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.