ಬೆಳಗಾವಿ: ಜಿಲ್ಲೆಯ (Belagavi) ನಿಪ್ಪಾಣಿಯ ಹೊರವಲಯದಲ್ಲಿರುವ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ (Sugar Factory) ಭೀಕರ ಅಗ್ನಿ (Fire) ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿರುವ ಘಟನೆ ನಡೆದಿದೆ.
ಬಾಯ್ಲರ್‌ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಕ್ಷಣಾರ್ಧದಲ್ಲಿ ಕಾರ್ಖಾನೆಗೆ ಹರಡಿಕೊಂಡಿದೆ ಎನ್ನಲಾಗಿದೆ.. ಬೆಂಕಿಯಿಂದ 24 ಟನ್ ಸಾಮರ್ಥ್ಯದ ಬಾಯ್ಲರ್ (Factory Boiler) ಹೊತ್ತಿ ಉರಿದಿದೆ. ಆದರೆ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ.
5 ಕೋಟಿ ರೂ. ಮೌಲ್ಯದ ಆಸ್ತಿ ಬೆಂಕಿಗಾಹುತಿಯಾಗಿದೆ. ಕಾರ್ಖಾನೆಯಲ್ಲಿನ ಅಗ್ನಿ ನಂದಿಸಲು ಸ್ಥಳದಲ್ಲಿ 9 ಅಗ್ನಿಶಾಮಕ ವಾಹನ ಆಗಮಿಸಿದ್ದವು.