ನೆಲಮಂಗಲ: ದಿ.ಲೀಲಾವತಿ ಅವರ ಎಸ್ಟೇಟ್ ಬಳಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ.
ಕೂಡಲೇ ಬೆಂಕಿ ನೋಡಿದ ತೋಟದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಗಳೂರು (Bengaluru) ಹೊರವಲಯದ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿಯ ಹಿರಿಯ ನಟಿ ದಿ.ಲೀಲಾವತಿ ತೋಟದ ಪಕ್ಕದಲ್ಲಿ ಈ ಅವಘಡ ಸಂಭವಿಸಿದೆ. ಅರಣ್ಯ ಪ್ರದೇಶ ಹಾಗೂ ಅಕ್ಕಪಕ್ಕದ ರೈತರ ಜಮೀನಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿನೋದ್ ರಾಜ್ ತೋಟದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಹೆಚ್ಚಿನ ಹಾನಿಯಾಗುವ ಸಂಭವವಿತ್ತು ಎನ್ನಲಾಗಿದೆ.
ಬೇಸಿಗೆ ಹಿನ್ನೆಲೆ ಒಣಗಿದ ಅರಣ್ಯದಿಂದ ಕಾಡ್ಗಿಚ್ಚು ಉಂಟಾಗಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.