ಬೆಂಗಳೂರು: ನಟಿ ರನ್ಯಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟಿ ರನ್ಯಾ ಪರವಾಗಿ ಅಕುಲಾ ಅನುರಾಧ ಎಂಬುವವರು ದೂರು ದಾಖಲಿಸಿದ್ದಾರೆ. ರನ್ಯಾ ವಿರುದ್ದ ಅವಾಚ್ಯ ಪದಬಳಸಿ ತೇಜೋವಧೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಿಎನ್.ಎಸ್. ಸೆಕ್ಷನ್ 79ರ ಅಡಿ ದೂರು ದಾಖಲಿಸಲಾಗಿದೆ.
ಇತ್ತೀಚೆಗಷ್ಟೇ ರನ್ಯಾ ಪ್ರಕರಣದ ವಿರುದ್ಧ ಮಾತನಾಡಿದ್ದ ಯತ್ನಾಳ್, ರನ್ಯಾ ನಂಟು ಹೊಂದಿರುವ ಸಚಿವರು ಯಾರು ಎಂಬುವುದು ನನಗೆ ಗೊತ್ತಿದೆ. ಅಧಿವೇಶನದಲ್ಲಿ ಆ ಸಚಿವರ ಹೆಸರನ್ನು ಪ್ರಸ್ತಾಪಿಸುತ್ತೇನೆ. ರನ್ಯಾ ಜೊತೆಗೆ ಸಂಬಂಧ ಹೊಂದಿದವರು. ಆಕೆಗೆ ಪ್ರೋಟೊಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದ್ರು? ಗೋಲ್ಡ್ ಎಲ್ಲಿಟ್ಟು ತಂದ್ರು ಗೊತ್ತಿದೆ ಎಂದು ಹೇಳಿದ್ದರು.