ಬೆಂಗಳೂರು | ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬೆದರಿಕೆ, ನಿಂದನೆ ಆರೋಪದಡಿ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ದ FIR ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ. ರಜತ್ ಫೋನ್ ಕರೆ ಮುಖಾಂತರ ಡಾಗ್ ಸತೀಶ್ ಸ್ನೇಹವನ್ನು ಬಿಡಬೇಕೆಂದು ಬೆದರಿಕೆ ಹಾಕಿರೋ ಆರೋಪ ಕೇಳಿಬಂದಿದೆ. ದೂರುದಾರರ ಕಾರಿನ ಪೋಟೋ ಕಳಿಸಿ ಮೆಸೇಜ್ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. Sir this is Rajath Buji, call maadtidini call back madthira.. illa nave olage kalusbeka? ಎಂದು ಮೆಸೇಜ್ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೇ, ಕಾನ್ಫರೆನ್ಸ್ ಕಾಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸದ್ಯ ಈ ಸಂಬಂಧ BNS 351(2), 352 ಸೆಕ್ಷನ್ ಅಡಿ ರಜತ್ ಹಾಗೂ ಕಿರಣ್ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಈ ದೂರಿನನ್ವಯ ಪೋನ್ ಕರೆಯಲ್ಲಿ ಮಾತನಾಡಿರೋದು ರಜತ್ ಅಥವಾ ಬೇರೆ ವ್ಯಕ್ತಿ ಎಂಬುವುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ.
ಇದನ್ನೂ ಓದಿ : 25 ಅಡಿ ಗುಂಡಿಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆಯ ರೋಚಕ ರಕ್ಷಣೆ!



















