ಬೆಂಗಳೂರು : ಬಸ್‌ನಲ್ಲಿದ್ದ ಹೆಚ್ಚಿನ ಮಹಿಳಾ ಪ್ರಯಾಣಿಕರನ್ನು ನೋಡಿ ಸಿಟ್ಟಿಗೆದ್ದಿದ್ದ ಬಿಎಂಟಿಸಿ ಕಂಡಕ್ಟರ್ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಚನ್ನಪಟ್ಟಣದಿಂದ ಬೆಂಗಳೂರಿಗೆ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ಬಸ್ ತುಂಬಾ ರಶ್ ಇದ್ದ ಕಾರಣ ಸರ್ಕಾರ ಮತ್ತು ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ಕಂಡಕ್ಟರ್ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಿಮಗೆ ಮನೆಯಲ್ಲಿ ಮಾಡೋದಕ್ಕೆ ಕೆಲಸ ಇಲ್ವಾ? ಫ್ರೀ ಅಂತ ಊರು ಊರು ಸುತ್ತುತ್ತಿರಾ? ಎಂದು ಕಿರಿಕ್ ಮಾಡಿ, ಕೆಂಗೇರಿ ಬಳಿಯೇ ಮಹಿಳೆಯನ್ನ ಬಸ್‌ನಿಂದ ಇಳಿಸಿ, ಅವಾಚ್ಯ ಶದ್ದಗಳಿಂದ ನಿಂದಿಸಿರುವ ಘಟನೆ ಕಳೆದ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನಾ ಸಂಬಂಧ ಕೆಂಗೇರಿ ಪೊಲೀಸರಿಗೆ ಗೌರಮ್ಮ ಎಂಬ ಮಹಿಳೆ ದೂರು ನೀಡಿದ್ದಾರೆ. ಗೌರಮ್ಮ ನೀಡಿದ ದೂರಿನ ಆಧಾರದ ಮೇಲೆ ಕಂಡಕ್ಟರ್ ಮೇಲೆ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ : ಪಾಕ್ ಕ್ರಿಕೆಟ್‌ನಲ್ಲಿ ಆಂತರಿಕ ಬಿರುಕು? ನಾಯಕ ಸಲ್ಮಾನ್ ಆಕ್ರೋಶದ ವಿಡಿಯೋ ವೈರಲ್



















