ಬೆಂಗಳೂರು ಗ್ರಾಮಾಂತರ : ಹೆದ್ದಾರಿಯಲ್ಲಿ ಕಾರಿನ ಸನ್ ರೂಫ್ ಓಪನ್ ಮಾಡಿಕೊಂಡು ಅಪಾಯಕಾರಿ ಚಾಲನೆ ಮಾಡುತ್ತಿದ್ದವನಿಗೆ ಪೋಲಿಸರು ಕ್ಲಾಸ್ ತೆಗೆದುಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಡೆದಿದೆ.
ಕಾರಿನ ಸನ್ ರೂಫ್ ಓಪನ್ ಮಾಡಿಕೊಂಡು ಮಕ್ಕಳನ್ನು ನಿಲ್ಲಿಸಿಕೊಂಡು ಚಾಲಕ ಚಲಿಸುತ್ತಿದ್ದು, ಅಪಾಯಕಾರಿ ಚಾಲನೆ ಮಾಡಿದ್ದರೆಂದು ಹೊಸಕೋಟೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.
ಹೊಸಕೋಟೆಯಿಂದ ಬೆಂಗಳೂರು ಕಡೆಗೆ ಪ್ರಯಾಣ ಮಾಡುತ್ತಿದ್ದಾಗ ಈ ರೀತಿ ಚಾಲನೆ ಮಾಡಿದ್ದು, ಪೊಲೀಸರು ದಂಡವಿಧಿಸಿ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಮೈಸೂರಲ್ಲಿ ಆಕಸ್ಮಿಕವಾಗಿ ಹೊತ್ತಿ ಉರಿದ ಗುಜರಿ | ತಪ್ಪಿದ ಅನಾಹುತ



















