ಬೆಂಗಳೂರು: ಇತ್ತೀಚೆಗಷ್ಟೇ ಮೆಟ್ರೋದಲ್ಲಿ ಊಟ ಮಾಡಿದ್ದ ಯುವತಿಗೆ ದಂಡ ವಿಧಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಪಾನ್ ಮಸಾಲ ತಿಂದು ಉಗುಳಿದ್ದ ವ್ಯಕ್ತಿಗೆ ದಂಡ ವಿಧಿಸಲಾಗಿದೆ.
ಕನಕಪುರ ರಸ್ತೆಯ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಆವರಣದಲ್ಲಿ ಈ ಘಟನೆ ನಡೆದಿದೆ. ಮೇ 2 ರಂದು ಸಂಜೆ 6.30ಕ್ಕೆ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ವ್ಯಕ್ತಿಯೋರ್ವ ಪಾನ್ ಮಸಾಲ ತಿಂದು, ಫ್ಲಾಟ್ ಫಾರ್ಮ್ 1 ರ ಲಿಫ್ಟ್ ಬಳಿ ಉಗುಳಿದ್ದಾನೆ. ಉಗುಳಿ ಹೋಗಿದ್ದ ವ್ಯಕ್ತಿಯನ್ನು ಹುಡುಕಿ ದಂಡ ಹಾಕಲಾಗಿದೆ.
ಮೆಟ್ರೋದಲ್ಲಿ ಕಸ ಎಸೆಯುವುದು, ಉಗುಳುವುದು ಮಾಡುವಂತಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿದ್ದಕ್ಕೆ ವ್ಯಕ್ತಿಗೆ ದಂಡ ವಿಧಿಸಲಾಗಿದೆ.