ಬೆಳಗಾವಿ: ಕಂತಿನ ಹಣ ಕಟ್ಟುವಂತೆ ಪಟ್ಟು ಹಿಡಿದ ಫೈನಾನ್ಸ್ ಸಿಬ್ಬಂದಿ ಸಾಲಗಾರರ ಮನೆಯಲ್ಲೇ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. .
ಖಾನಾಪುರ ತಾಲೂಕಿನ ಕೇರವಾಡ, ಗುಂಡ್ಯಾನಟ್ಟಿ ಗ್ರಾಮದಲ್ಲಿ ಈ ರೀತಿ ನಡೆದಿದೆ ಎಂದು ಆರೋಪಿಸಲಾಗಿದೆ. ಸಾಲವನ್ನು ಇವತ್ತೇ ಕಟ್ಟಬೇಕೆಂದು ಫೈನಾನ್ಸ್ ಸಿಬ್ಬಂದಿ ಸಾಲಗಾರರ ಮನೆಯಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಫೈನಾನ್ಸ್ ಸಿಬ್ಬಂದಿ, ಇವತ್ತೇ ಕಂತು ಕಟ್ಟಬೇಕು. ಇದು ಮೊದಲ ಕಂತು ಎಂದಿದ್ದಾರೆ. ಅದಕ್ಕೆ ಸಾಲ ಪಡೆದ ಮಹಿಳೆ, ನಾಲ್ಕು ದಿನ ಸಮಯಾವಕಾಶ ಕೊಡಿ, ಹಣ ಇಲ್ಲ ಕಟ್ಟುತ್ತೇನೆ ಎಂದಿದ್ದಾರೆ.
ಇದಕ್ಕೆ ಪಟ್ಟು ಬಿಡದ ಫೈನಾನ್ಸ್ ಸಿಬ್ಬಂದಿ ನನ್ನನ್ನು ಪೊಲೀಸರು ಎಳೆದುಕೊಂಡು ಹೋದರೂ ಬಿಡುವುದಿಲ್ಲ. ನನಗೆ ಇವತ್ತೇ ನೀವು ಹಣ ಕಟ್ಟಬೇಕು ಎಂದು ಸಿಬ್ಬಂದಿಯೊಬ್ಬ ಮಾತನಾಡಿದ್ದಾರೆ. ಬೆಳಗ್ಗೆ 8ಕ್ಕೆ ಬಂದಿದ್ದ ಫೈನಾನ್ಸ್ ಸಿಬ್ಬಂದಿ ರಾತ್ರಿ 10ರ ವರೆಗೂ ಮನೆಯಲ್ಲೇ ಠಿಕಾಣಿ ಹೂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.