ನವದೆಹಲಿ: ಫೆಬ್ರವರಿ 15ರಿಂದ 25ರ ತನಕ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2024-25ರ(Hockey Pro League 2024-25) ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು. ಹಾಕಿ ಅಭಿಮಾನಿಗಳಿಗೆ ಹಾಕಿ ಇಂಡಿಯಾವು ಎಲ್ಲ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ಕಲ್ಪಿಸಿದೆ.
ಪುರುಷರ ವಿಭಾಗದಲ್ಲಿ ಭಾರತ, ಇಂಗ್ಲೆಂಡ್, ಸ್ಪೇನ್, ಜರ್ಮನಿ ಹಾಗೂ ಐರ್ಲೆಂಡ್ ತಂಡಗಳು ಕಾದಾಟ ನಡೆಸಿದರೆ ಮಹಿಳೆಯರ ವಿಭಾಗದಲ್ಲಿ ಭಾರತ ತಂಡವು ಜರ್ಮನಿ, ಇಂಗ್ಲೆಂಡ್, ನೆದರ್‌ಲ್ಯಾಂಡ್ಸ್ ಹಾಗೂ ಸ್ಪೇನ್ ತಂಡಗಳನ್ನು ಎದುರಿಸಲಿದೆ. ಪ್ರತೀ ತಂಡಗಳು ಎರಡು ಬಾರಿ ಆಡಲಿವೆ.
ಭಾರತ ಪುರುಷರ ತಂಡವನ್ನು ತಂಡವನ್ನು ಹಿರಿಯ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ (DragFlickr Harmanpreet Singh) ಮುನ್ನಡೆಸಲಿದ್ದಾರೆ. ಹಾರ್ದಿಕ್ ಸಿಂಗ್ ಉಪನಾಯಕನಾಗಿದ್ದಾರೆ. 24 ಸದಸ್ಯರುಗಳನ್ನು ಒಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು(Indian women’s hockey team) ಸಲಿಮಾ ಟೇಟೆ (Salima Tate) ಮುನ್ನಡೆಸಲಿದ್ದಾರೆ. ಫಾರ್ವರ್ಡ್ ಆಟಗಾರ್ತಿ ನವನೀತ್ ಕೌರ್(Navneet Kaur) ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಪುರುಷರ ತಂಡ
ಗೋಲ್‌ಕೀಪರ್‌ಗಳು: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ, ಪ್ರಿನ್ಸ್‌ದೀಪ್ ಸಿಂಗ್.
ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್(ನಾಯಕ), ಸುಮಿತ್, ಸಂಜಯ್, ಜುಗ್ರಾಜ್ ಸಿಂಗ್, ನೀಲಂ ಸಂಜೀಪ್, ವರುಣ್ ಕುಮಾರ್, ಯಶ್‌ದೀಪ್ ಸಿವಾಚ್.
ಮಿಡ್‌ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್(ಉಪ ನಾಯಕ), ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ,ಎಂ.ರಬಿಚಂದ್ರ ಸಿಂಗ್, ರಾಜಿಂದರ್ ಸಿಂಗ್.
ಫಾರ್ವರ್ಡ್‌ಗಳು: ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಬಾಬಿ ಸಿಂಗ್ ಧಾಮಿ, ಶೀಲಾನಂದ ಲಾಕ್ರಾ, ದಿಲ್‌ಪ್ರೀತ್ ಸಿಂಗ್, ಅರೈಜೀತ್ ಸಿಂಗ್, ಉತ್ತಮ್ ಸಿಂಗ್, ಅಂಗದ್ ಸಿಂಗ್, ಅರ್ಷದೀಪ್ ಸಿಂಗ್.
ಭಾರತದ ಮಹಿಳಾ ಹಾಕಿ ತಂಡ
ಗೋಲ್‌ಕೀಪರ್ಸ್: ಸವಿತಾ ಪೂನಿಯ, ಬಿಚು ದೇವಿ ಖರಿಬಮ್
ಡಿಫೆಂಡರ್‌ಗಳು: ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಉದಿತಾ, ಜ್ಯೋತಿ, ಇಶಿಕಾ ಚೌಧರಿ, ಜ್ಯೋತಿ ಛತ್ರಿ.
ಮಿಡ್ ಫೀಲ್ಡರ್‌ಗಳು: ವೈಷ್ಣವಿ ವಿಠಲ್ ಫಾಲ್ಕೆ, ನೇಹಾ, ಮನಿಶಾ ಚೌಹಾಣ್, ಸಲಿಮಾ ಟೇಟೆ(ನಾಯಕಿ), ಸುನೆಲಿತಾ ಟೊಪ್ಪೊ, ಲಾಲ್‌ರೆಂಸಿಯಾಮಿ, ಬಲ್ಜೀತ್ ಕೌರ್, ಶರ್ಮಿಳಾ ದೇವಿ.
ಫಾರ್ವರ್ಡ್‌ಗಳು: ನವನೀತ್ ಕೌರ್(ಉಪ ನಾಯಕಿ), ಮುಮ್ತಾಝ್ ಖಾನ್, ಪ್ರೀತಿ ದುಬೆ, ಋತುಜಾ ದಾದಾಸೊ ಪಿಸಾಲ್, ಬ್ಯೂಟಿ ಡಂಗ್‌ಡಂಗ್, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯಾ.