ಬೆಂಗಳೂರು: ಇಲ್ಲಿಯ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ.
ಕಾರಾಗ್ರಹದಲ್ಲಿದ್ದ ಭರತ್ ಹಾಗೂ ಆತನ ಗ್ಯಾಂಗ್ ನಿಂದ ಅನಿಲ್ ಕುಮಾರ್ ಎಂಬ ಕೈದಿಯ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಘಟನೆ ಆ. 2ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೈದಿ ಅನಿಲ್ ಪ್ರಕರಣವೊಂದರ ವಿಚಾರಣೆಗೆಂದು ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಭರತ್ ಮತ್ತು ಆತನ ಗ್ಯಾಂಗ್ ಕ್ವಾರಂಟೈನ್ ಜೈಲಿನ ಬ್ಯಾರಕ್-2ರ ಹಿಂಭಾಗದ ಕೊಠಡಿ 6ರಲ್ಲಿ ಹಲ್ಲೆ ಮಾಡಿದ್ದಾರೆ. ನಮ್ಮನ್ನು ಕಂಡು ಉಗಿತಿಯಾ ಎಂದು ಹೇಳಿ ಆಯುಧದಿಂದ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ 8 ಜನ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಾಯಗೊಂಡಿರುವ ಅನಿಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭರತ್ ಮತ್ತು ಆತನ ಗ್ಯಾಂಗ್ 2025ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೆ, ಅನಿಲ್ ಕೂಡ ಕೊಲೆ ಪ್ರಕರಣದಲ್ಲಿ 2023ರಲ್ಲಿ ಜೈಲು ಸೇರಿದ್ದ ಎನ್ನಲಾಗಿದೆ.



















