ಮಂಡ್ಯ : ಆಸ್ತಿ ವಿಚಾರಕ್ಕಾಗಿ ದಾಯಾದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಒಂದೇ ಕುಟುಂಬದ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆಯ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಿತ್ರಾಜಿತ ಆಸ್ತಿಯ ರಸ್ತೆಗೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಒಂದೇ ಕುಟುಂಬದ ಸೋಮೇಗೌಡ, ವಸಂತ್ ಕುಮಾರ್, ನಿಶಾಂತ್ ಕುಮಾರ್‌ಗೆ ಗಾಯವಾಗಿದ್ದು, ಉಗ್ರೇಗೌಡರ ಕುಟುಂಬದಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಸದ್ಯ ಗಾಯಾಳುಗಳಿಗೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನಾ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಝಲಾಗಿದೆ.
ಇದನ್ನೂ ಓದಿ : ಹೆಲ್ಮೆಟ್ ಇಲ್ಲ, ಲೈಸನ್ಸ್ ಇಲ್ಲ – ವೇಗದ ಬೈಕ್ ಚಾಲನೆ.. ವಿದ್ಯಾರ್ಥಿ ಬಲಿ


















