ಕುಂದಾಪುರ: ಆಲೂರು ಹರ್ಕೂರು ಗ್ರಾಮಸ್ಥರ ವತಿಯಿಂದ, ಮೂಕಾಂಬಿಕಾ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ನಾನಾ ವಲಯಗಳ ಮೂಲಕ ಆಲೂರಿನಲ್ಲಿ ಸೇವೆ ಸಲ್ಲಿಸಿದ ಸಹೃದಯಿಗಳ ಸೇವೆ ಪರಿಗಣಿಸಿ, ಊರ ಗ್ರಾಮಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು. ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ್ ಎನ್ ದೇವಾಡಿಗ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಟೆಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಠಲ್ ಸುವರ್ಣ ಹಾಗೂ ಆಲೂರು-ಹರ್ಕೂರು ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಆಶಿಕ್ ಹುಸೇನ್, ಹಾಗೆಯೇ, ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ದಿಲೀಫ್ ಕುಮಾರ್ ರವರನ್ನು ಆಲೂರು ಹರ್ಕೂರು ಗ್ರಾಮಸ್ಥರ ವತಿಯಿಂದ ಅಭಿನಂದಿಸಿ, ಸನ್ಮಾನಿಸಲಾಯಿತು.

ಈ ವೇಳೆ, ಆಲೂರು ಮಹಾಬಲ ಜೋಯಿಸ್, ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ, ಶಾಖಾಧಿಕಾರಿ ಸಂಜೀವ ಪೂಜಾರಿ, ಅಪ್ಪು ಕುಲಾಲ್, ತೇಜಪ್ಪ ಶೆಟ್ಟಿ, ರವಿ ಶೆಟ್ಟಿ ಆಲೂರು, ಸತೀಶ ಶೆಟ್ಟಿ, ಪ್ರಶಾಂತ ಕುಲಾಲ್, ಅರುಣ ಶೆಟ್ಟಿ, ಕೃಷ್ಣ ಶೆಟ್ಟಿ, ವಾಸುದೇವ ಶ್ಯಾನುಭಾಗ್, ರಾಘವೇಂದ್ರ ದೇವಾಡಿಗ, ಸಂತೋಷ ಪೂಜಾರಿ ಉಪಸ್ಥಿತರಿದ್ದರು.
ಕೆ.ಕೆ ರಾಘು ರಟ್ಟಾಡಿ ಸ್ವಾಗತಿಸಿದರು. ಶಿಕ್ಷಕ ಉದಯ ಕುಮಾರ್ ಶೆಟ್ಟಿ ನಿರೂಪಿಸಿದರು. ಸುನೀಲ್ ನಾರ್ಕಳಿ ವಂದಿಸಿದರು.
