ಪ್ರತಿದಿನ ಸ್ನಾನ ಮಾಡುವುದು ತುಂಬಾ ಒಳ್ಳೆಯ ಅಭ್ಯಾಸ. ಕೆಲವರು ಕೆಲಸ ಆರಂಭವಾಗುವ ಮುನ್ನ ಫ್ರೆಶ್ ಮೂಡ್ ಇರಲಿ ಅಂತ ಬೆಳಿಗ್ಗೆ ಸ್ನಾನ ಮಾಡುತ್ತಾರೆ. ಇನ್ನು ಕೆಲವರು ಎಲ್ಲ ಕೆಲಸ ಮುಗಿಸಿ ಚೆನ್ನಾಗಿ ನಿದ್ದೆ ಬರಲಿ ಅಂತ ರಾತ್ರಿ ಸ್ನಾನ ಮಾಡುತ್ತಾರೆ.
ಪ್ರತಿದಿನ ಸ್ನಾನ ಮಾಡುವುದರಿಂದ ದೇಹಕ್ಕೆ ರಿಲ್ಯಾಕ್ಸ್ ಸಿಗುವುದರ ಜೊತೆಗೆ ನಮ್ಮ ತ್ವಚೆಯು ಕೂಡ ಹೊಳಪಾಗಿರುತ್ತದೆ. ಆದರೆ, ಕೆಲವರಿಗೆ ಸ್ನಾನ ಮಾಡಿದ ನಂತರ ಸುಸ್ತಾಗುವುದು, ತಲೆ ತಿರುಗುವುದು ಈ ರೀತಿಯ ಅನುಭವಗಳು ಆಗುತ್ತವೆ. ಇದಕ್ಕೆ ಕಾರಣ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದಿಲ್ಲ. ಹಾಗಾದರೆ ಈ ರೀತಿ ಸಮಸ್ಯೆ ಆಗುತ್ತಿದ್ದರೆ ಏನು ಮಾಡಬೇಕು? ಸ್ನಾನಕ್ಕೆ ಹೋಗುವ ಮೊದಲು ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಇದು ನಿಮ್ಮ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಸ್ನಾನ ಮಾಡುವಾಗ ತುಂಬಾ ಬಿಸಿ ನೀರು ಬೇಡ. ತುಂಬಾ ತಣ್ಣನೆಯ ನೀರು ಕೂಡ ಬೇಡ. ಬದಲಿಗೆ ಉಗರು ಬೆಚ್ಚಗಿನ ನೀರನ್ನು ಬಳಸಿ ಇದರಿಂದ ನಿಮಗೆ ಕಾಡುವ ಸುಸ್ತನ್ನು ತಡೆಯಬಹುದು ಜೊತೆಗೆ, ನಿಮ್ಮ ತ್ವಚೆಯ ಆರೋಗ್ಯವು ಸುಧಾರಿಸುತ್ತದೆ.