ಬೆಂಗಳೂರು : ನೃಪತುಂಗ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಪದವಿ ಕೋರ್ಸ್ ಗಳ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ಖಂಡಿಸಿ, ತರಗತಿಗಹಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಶ್ವವಿದ್ಯಾಲಯದ ಆವರಣದಲ್ಲಿ ಪದವಿ ಕೋರ್ಸ್ ಗಳ ಶುಲ್ಕ ಶೇ 30 ರಿಂದ ಶೇ.35ರಷ್ಟು ಏರಿಕೆ ಮಾಡಲಾಗಿರುವುದನ್ನು ಖಂಡಿಸಿ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ವಿದ್ಯಾರ್ಥಿಗಳು ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಬಿಎ, ಬಿಎಸ್ಇ, ಬಿ.ಇಡಿ , ಸೇರಿದ್ದಂತೆ ಬಹುತೇಕ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳ ಶುಲ್ಕ ಏರಿಕೆಗೆ ವಿವಿ ಮುಂದಾಗಿರುವುದನ್ನು ವಿರೋಧಿಸಿ ಪ್ರತಿಭಟನಾ ನಿರತರಾಗಿದ್ದಾರೆ.
ಶೌಚಾಲಯದ ವ್ಯವಸ್ಥೆ ಸರಿಯಿಲ್ಲ, ಕುಡಿಯುವ ನೀರಿನ ವೆವಸ್ಥೆ ಸರಿಯಿಲ್ಲ. ಸರಿಯಾದ ಬೋಧಕ ಸಿಬ್ಬಂದಿಗಳೂ ಇಲ್ಲ. ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಿಲ್ಲ. ಆದರೆ ಶುಲ್ಕ ಏರಿಕೆಗೆ ಮುಂದಾಗಿರುವುದನ್ನು ವಿದ್ಯಾರ್ಥಿಗಳು ಖಂಡಿಸಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಶುಲ್ಕ ಏರಿಕೆ ಕೈ ಬಿಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.




















