ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರು ಪತಿಯ ವಿಕೃತ ಕಾಮಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ ಶಿಡ್ಲಘಟ್ಟ(Sidlaghatta) ನಗರದ ಪಿಲೇಚರ್ಸ್ ಕ್ವಾಟ್ರಸ್ ನಲ್ಲಿ ಈ ಘಟನೆ ನಡೆದಿದೆ. ಎಸ್.ಮೊಸಿನ್ ಪಾಷ(39) ಎಂಬಾತನ ವಿರುದ್ಧವೇ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಆತನ ಕಿರುಕುಳಕ್ಕೆ ಆತನ ತಾಯಿ ಕೂಡ ಸಾಥ್ ನೀಡಿರುವ ಆರೋಪ ಕೇಳಿ ಬಂದಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆತನಿಗೆ ಪತ್ನಿಯ ಜೊತೆ ವಿಕೃತ ಕಾಮದಾಟವಾಡುವ ಹುಚ್ಚುತನ. ಸೆಕ್ಸ್ ವಿಡಿಯೋ ತೋರಿಸಿ ಅದೇ ರೀತಿ ಸಹಕರಿಸುವಂತೆ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಹಾಗೆ ಮಾಡದಿದ್ದರೆ ಪತ್ನಿಯ ಏಕಾಂತ ಪೋಟೋ, ವೀಡಿಯೋಗಳನ್ನು ತೆಗೆದು ಅವುಗಳನ್ನು ಮಾರಾಟ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಪತ್ನಿ ಸಾಥ್ ನೀಡದಿದ್ದರೆ ಬೇರೆ ಮಹಿಳೆಯ ಜೊತೆ ವೀಡಿಯೋ ಕಾಲ್ ಮಾಡಿ ವಿಕೃತ ಆನಂದ ಪಡೆಯುತ್ತಿದ್ದ. ಇದಕ್ಕೆ ಪತ್ನಿ ವಿರೋಧ ಮಾಡಿದ್ದಕ್ಕೆ ಕೊಲೆ ಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ಆಪ್ರಿಕನ್ನರಿಗೆ ನೀನ್ನ ಮಾರಾಟ ಮಾಡಿರುವುದಾಗಿ ಹೆದರಿಸುತ್ತಿದ್ದ ಎನ್ನಲಾಗಿದೆ. ಅಕ್ಕ ಪಕ್ಕದ ಮನೆಯ ಯುವತಿಯರ, ಮಹಿಳೆಯರ ಮೊಬೈಲ್ ನಂಬರ್ ಗಳನ್ನು ತಂದು ಕೊಡುವಂತೆ ಕಿರುಕುಳ ನೀಡುತ್ತಿದ್ದ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಇತ್ತೀಚೆಗೆ ಪತ್ನಿಯ ಮೇಲೆ ಮಾರಣಾಂತಿಕ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿದಂ ಬೇಸತ್ತ ಮಹಿಳೆ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.