ಮೈಸೂರು: ನಗರದ (Mysuru) ಇನ್ಫೋಸಿಸ್ (Infosys) ಕ್ಯಾಂಪಸ್‍ನಲ್ಲಿ ಚಿರತೆ (Leopard) ಕಾಣಿಸಿಕೊಂಡಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಚಿರತೆ ಓಡಾಡಿರುವ ಕುರಿತು ವಿಡಿಯೋ ವೈರಲ್ ಆಗುತ್ತಿವೆ. ಆದರೆ, ಚಿರತೆ ಮಾತ್ರ ಬಲೆಗೆ ಬೀಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಟ್ರೈನಿ ಉದ್ಯೋಗಿಗಳಿಗೆ ಜ.26ರ ವರೆಗೆ ರಜೆ ಘೋಷಿಸಲಾಗಿದೆ
ಈಗಾಗಲೇ ಹಿರಿಯ ಕೆಲಸಗಾರರಿಗೆ ಇನ್ಫೋಸಿಸ್ ಆಡಳಿತ ಮಂಡಳಿ ವರ್ಕ್ ಫ್ರಮ್ ಹೋಮ್ ಘೋಷಿಸಿದೆ. ಒಳಗೆ ಅಳವಡಿಸಲಾದ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗುತ್ತಿದೆ. ಆದರೆ ಅರಣ್ಯ ಇಲಾಖೆ ಇರಿಸಿರುವ ಬೋನಿಗೆ ಚಿರತೆ ಬೀಳುತ್ತಿಲ್ಲ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯತ್ನಿಸುತ್ತಿದ್ದಾರೆ.
ಹೀಗಾಗಿ ಇನ್ಫೋಸಿಸ್ ಸಂಸ್ಥೆ, ಮುನ್ನೆಚ್ಚರಿಕಾ ಕ್ರಮವಾಗಿ ಟ್ರೈನಿ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಕ್ಯಾಂಪಸ್ ನಲ್ಲಿ ಡಿ.31 ರಂದು ಚಿರತೆ ಕಾಣಿಸಿಕೊಂಡಿತ್ತು. ಆನಂತರ ಹ್ಯೂಮನ್ ರಿಸೊರ್ಸ್ ವಿಭಾಗದಿಂದ ಮನೆಯಲ್ಲೇ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಈಗ ಟ್ರೈನಿಗಳಿಗೆ ರಜೆ ಘೋಷಿಸಲಾಗಿದೆ