ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಕಳೆದ ಒಂದು ವರ್ಷದಿಂದ ಏರಿಳಿತವೇ ಜಾಸ್ತಿ ಇರುವ ಕಾರಣ ಹೆಚ್ಚಿನ ಜನ ಸಾಂಪ್ರದಾಯಿಕ ಹೂಡಿಕೆಗಳ ಮೊರೆ ಹೋಗುತ್ತಿದ್ದಾರೆ. ಅಂದರೆ, ಬ್ಯಾಂಕ್ ಎಫ್ ಡಿ, ಪೋಸ್ಟ್ ಆಫೀಸ್ ಹೂಡಿಕೆ ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಅದರಲ್ಲೂ, ಬ್ಯಾಂಕ್ ಎಫ್ ಡಿಯಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಜನ ಬಯಸುತ್ತಿದ್ದಾರೆ. ಇನ್ನು, 3 ವರ್ಷಗಳವರೆಗೆ ಎಫ್ ಡಿ ಇರಿಸಬೇಕು ಎಂದರೆ ಬ್ಯಾಂಕುಗಳು ಹೆಚ್ಚಿನ ಬಡ್ಡಿ ನೀಡುತ್ತವೆ. ಆ ಬ್ಯಾಂಕುಗಳ ಪಟ್ಟಿ ಇಲ್ಲಿದೆ.
ಎಚ್ ಡಿ ಎಫ್ ಸಿ ಬ್ಯಾಂಕ್: ಮೂರು ವರ್ಷಗಳವರೆಗೆ ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದರೆ ಶೇ.6.45ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಆದರೆ ಶೇ.6.95ರಷ್ಟು ಬಡ್ಡಿ ನೀಡಲಾಗುತ್ತದೆ.
ಐಸಿಐಸಿಐ ಬ್ಯಾಂಕ್: ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕಿನಲ್ಲಿ ಶೇ.6.6ರಷ್ಟು ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ.7.2ರಷ್ಟು ರಿಟರ್ನ್ಸ್ ಸಿಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್: ಈ ಬ್ಯಾಂಕಿನಲ್ಲಿ 3 ವರ್ಷಗಳ ಅವಧಿಗೆ ಎಫ್ ಡಿ ಇರಿಸಿದರೆ ಶೇ.6.4ರಿಂದ ಶೇ.6.9ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ.7.2ರವರೆಗೆ ಬಡ್ಡಿ ದರ ಇದೆ.
ಎಸ್ ಬಿ ಐ ಬ್ಯಾಂಕ್: ದೇಶದ ಬೃಹತ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 3 ವರ್ಷ ಹೂಡಿಕೆ ಮಾಡಿದರೆ ಶೇ.6.3ರಷ್ಟು ರಿಟರ್ನ್ಸ್ ದೊರೆಯುತ್ತದೆ. ಹಿರಿಯ ನಾಗರಿಕರಿಗೆ ಆದರೆ ಶೇ.6.8ರಷ್ಟು ಬಡ್ಡಿ ನಿಗದಿಪಡಿಸಲಾಗಿದೆ.
ಅದೇ ರೀತಿ ಕೆನರಾ ಬ್ಯಾಂಕಿನಲ್ಲಿ ಶೇ.6.25ರಷ್ಟು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ.6.6ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಮೂರು ವರ್ಷ ಎಫ್ ಡಿ ಇರಿಸಿದರೆ ಮಧ್ಯದಲ್ಲಿಯೇ ವಿತ್ ಡ್ರಾ ಮಾಡಿದರೆ ಬಡ್ಡಿಯ ಲಾಭ ಸಿಗುವುದಿಲ್ಲ ಎಂಬುದು ಗಮನದಲ್ಲಿರಬೇಕು.
ಇದನ್ನೂ ಓದಿ : 12,500 ರೂ. ಮಾಸಿಕ ಹೂಡಿಕೆಗೆ 40 ಲಕ್ಷ ರೂ. ರಿಟರ್ನ್ಸ್: ರಿಸ್ಕ್ ಚಿಂತೆಯೇ ಬೇಡ



















