ಬೆಂಗಳೂರು: ಹೂಡಿಕೆಯಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿ ಅಥವಾ ಎಫ್ ಡಿ (FD Interest Rates) ಇರಿಸುವ ಮೂಲಕ ಡೀಸೆಂಟ್ ರಿಟರ್ನ್ಸ್ ಪಡೆಯಲು ಬಯಸುತ್ತಿದ್ದೀರಾ? ಹಾಗಾದರೆ, ಹೆಚ್ಚು ಎಫ್ ಡಿ ಬಡ್ಡಿದರ ಇರುವ ಕೆಲವು ಬ್ಯಾಂಕುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇವುಗಳನ್ನು ಗಮನಿಸಿ ನೀವು ಎಫ್ ಡಿ ಇರಿಸುವ ತೀರ್ಮಾನ ತೆಗೆದುಕೊಳ್ಳಬಹುದು.
- ಎಚ್ ಡಿ ಎಫ್ ಸಿ ಬ್ಯಾಂಕ್
ಎಚ್ ಡಿ ಎಫ್ ಸಿ ಒಳ್ಳೆಯ ಬಡ್ಡಿದವರನ್ನು ನೀಡುತ್ತಿದೆ. ಎಫ್ ಡಿ ಮೊತ್ತವನ್ನು 15 ರಿಂದ 21 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿ ಇರಿಸಿದರೆ ಬಡ್ಡಿ ದುಡ್ಡು ಸಿಗಲಿದೆ. ಅತ್ಯಧಿಕ ಬಡ್ಡಿ ಮೊತ್ತವು ಸಾಮಾನ್ಯರಿಗೆ ವಾರ್ಷಿಕ ಶೇ.6.60ರಷ್ಟು ಹಾಗೂ ಹಿರಿಯ ನಾಗರಿಕರಿಗೆ 7.10 ಪ್ರತಿಶತ ಇರಲಿದೆ. ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್ ಕ್ರಮವಾಗಿ ಶೇ.6.25 ಮತ್ತು ಶೇ. 6.75 ಬಡ್ಡಿ ನೀಡುತ್ತಿದೆ. - ಐಸಿಐಸಿಐ ಬ್ಯಾಂಕ್
ಇದರಲ್ಲೂ ಎಫ್ ಡಿ ಮೇಲೆ ಒಳ್ಳೆಯ ಬಡ್ಡಿದರವಿದೆ. 2 ರಿಂದ 5 ವರ್ಷಗಳ ಅವಧಿಗೆ ಹಣವನ್ನು ಇರಿಸಿದರೆ ಅದರ ಮೇಲೆ ಶೇ.6.60 ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ 7.10 ಬಡ್ಡಿ ಸಿಗಲಿದೆ. - ಕೋಟಕ್ ಮಹೀಂದ್ರಾ ಬ್ಯಾಂಕ್
ಕೋಟಕ್ ಬ್ಯಾಂಕ್ ನಲ್ಲಿಯೂ 391 ದಿನಗಳಿಂದ 23 ತಿಂಗಳ ವರೆಗಿನ ಅವಧಿಯಲ್ಲಿ ನೀವು ಠೇವಣಿಯನ್ನು ಇರಿಸಿದರೆ, ಈ ಅವಧಿಗೆ ಶೇ.6.6 ರಷ್ಟು ಬಡ್ಡಿ ಸಿಗಲಿದೆ. ಈ ಬ್ಯಾಂಕ್ ನಲ್ಲಿ ಉತ್ತಮ ಸಾಲ ಸೌಲಭ್ಯವೂ ಇದೆ. - ಫೆಡರಲ್ ಬ್ಯಾಂಕ್
444 ದಿನಗಳ ಅವಧಿಗೆ ಅಂದರೆ ಒಂದೂವರೆ ವರ್ಷದ ಅವಧಿಗೆ ದುಡ್ಡನ್ನು ಇರಿಸಿದರೆ ಬಳಕೆದಾರರಿಗೆ ಶೇ. 6.85 ಬಡ್ಡಿ ಮೊತ್ತ ಸಿಗಲಿದೆ. ಇದೇ ಹಿರಿಯ ನಾಗರಿಕರಾಗಿದ್ದರೆ, ಅವರಿಗೆ ಶೇ. 7.35 ರಷ್ಟು ಬಡ್ಡಿ ಸಿಗಲಿದೆ. - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸರ್ಕಾರಿ ವಲಯದ ಎಸ್ ಬಿ ಐನಲ್ಲೂ ಒಳ್ಳೆಯ ಬಡ್ಡಿ ಸಿಗುತ್ತದೆ. ಈ ಬ್ಯಾಂಕ್ ನಲ್ಲಿ 2 ರಿಂದ 3 ವರ್ಷಗಳ ಅವಧಿಗೆ ಠೇವಣಿ ಇರಿಸಿದರೆ, ಶೇ 6.45ರಷ್ಟು ಬಡ್ಡಿ ಸಿಗಲಿದೆ. ಹಿರಿಯ ನಾಗರಿಕರಿಗೆ ಇನ್ನಷ್ಟು ಹೆಚ್ಚಿನ ಬಡ್ಡಿ ಮೊತ್ತ ಸಿಗಲಿದೆ.
ಗಮನಿಸಿ: ಬ್ಯಾಂಕುಗಳ ಎಫ್ ಡಿ ಬಡ್ಡಿದರದ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ಇದನ್ನು ಶಿಫಾರಸು ಎಂದು ಪರಿಗಣಿಸಬಾರದು. ಯಾವುದೇ ರೀತಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.