ಬೆಳಗಾವಿ: ಹೆತ್ತ ತಂದೆಯೇ ಮಗನನ್ನು ಕೊಲೆ ಮಾಡಿ ಮುಚ್ಚಿಹಾಕಲು ಯತ್ನಿಸಿದ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಿರಣ ಉರ್ಪ ಬಾಳಾಸಾಹೇಬ ಆಲೂರೆ (31) ಕೊಲೆಯಾದ ಮಗ. ನಿಜಗುಣಿ ಆಲೂರೆ ಕೊಲೆ ಮಾಡಿದ ಪಾಪಿ ತಂದೆ. ತಾನು ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲಿಕ ಉಸ್ಮಾನ ಮುಲ್ಲಾ ಜೊತೆ ಸೇರಿಕೊಂಡು ಮಗನನ್ನು ಕೊಲೆ ಮಾಡಿ, ಬಳಿಕ ಹೃದಯಾಘಾತದಿಂದ ಮಗ ಮೃತನಾಗಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದಾನೆ.
ಕಿರಣ ಸಾವಿನ ಕುರಿತು ಅನುಮಾನಗೊಂಡ ಕಿರಣ ಸ್ನೇಹಿತರು ಉಸ್ಮಾನ ಹಾಗೂ ಕಿರಣ ತಂದೆ ನಿಜಗುಣಿ ಮೇಲೆ ಒತ್ತಡ ಹಾಕಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೃತ ಕಿರಣ ತಂದೆ ನಿಜಗುಣಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ದುಶ್ಚಟ ದಾಸನಾಗಿದ್ದ ಮಗನ ಕಾಟ ಸಹಿಸಲಾಗದೆ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಬಳಿಕ ಇಬ್ಬರು ಆರೋಪಗಳನ್ನು ಚಿಕ್ಕೋಡಿ ಪೊಲೀಸರಿಗೆ ಒಪ್ಪಿಸಲಾಗಿದೆ. ಮಗನ ಉಪಟಾಳವನ್ನು ಸಹಿಸಲಾಗಾದೆ ಕೊಲೆ ಮಾಡಿರು ಪಾಪಿ ತಂದೆ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ | ಇಬ್ಬರು ಕಾರ್ಮಿಕರು ಸಾವು, 6 ಮಂದಿಗೆ ಗಂಭೀರ ಗಾಯ



















