ಚಿಕ್ಕಮಗಳೂರು: ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಲೆ (Murder) ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ (Chikkamagaluru) ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಸಾಹುಕಾರ ಎಂದು ಹೆಸರು ಮಾಡಿದ್ದ ಗಂಗಾಧರೇಗೌಡ ಅವರ ಮಗ ಸಿದ್ದರಾಮೇಗೌಡ ಕೊಲೆಯಾಗಿರುವ ಮಾವ.
ಸಿದ್ದರಾಮೇಗೌಡ ಮತ್ತು ಆತನ ಅಕ್ಕ ನಿರ್ಮಲ ನಡುವೆ 26 ಎಕರೆ ತೆಂಗಿನ ತೋಟ, 24 ವಾಣಿಜ್ಯ ಮಳಿಗೆ, ಸೈಟ್ ವಿಚಾರವಾಗಿ ವಿವಾದವಿತ್ತು. ತಂದೆಯ ಆಸ್ತಿಗಾಗಿ ನಿರ್ಮಲ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಿದ್ದರು. ಈ ವಿಷಯವಾಗಿ ಅಕ್ಕ ಹಾಗೂ ತಮ್ಮನ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಗಲಾಟೆಯಲ್ಲಿ ಅಕ್ಕ ನಿರ್ಮಲಳಿಗೆ ಅವಾಚ್ಯ ಪದ ಬಳಸಿ ಬೈದಿದ್ದ. ಇದರಿಂದ ಕೋಪಗೊಂಡಿದ್ದ ನಿರ್ಮಲಾಳ ಮಗ ಸಂಜಯ್, ತನ್ನ ಮಾವ ಸಿದ್ದರಾಮೇಗೌಡನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಸಂಜಯ್ ಹತ್ಯೆ ಮಾಡಿರುವ ಅಳಿಯ ಎನ್ನಲಾಗಿದೆ. 22 ವರ್ಷದ ಸಂಜಯ್ ಚಿತ್ರದುರ್ಗದ ಖಾಸಗಿ ಕಾಲೇಜಿನಲ್ಲಿ ಡಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದು ಏಕಾಏಕಿ ಪಂಚನಹಳ್ಳಿಗೆ ಬಂದು ಮಾವನ ಹತ್ಯೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ. ಈಗ ಜೈಲು ಸೇರಿದ್ದಾನೆ.