ಬೆಂಗಳೂರು : ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಮಡಿವಾಳದ ಮಾರುತಿನಗರದಲ್ಲಿ ನಡೆದಿದೆ. ಕಿರಣ್ ಮತ್ತು ಸ್ಟೀಫನ್ ಇಬ್ಬರು ಹಲ್ಲೆ ಮಾಡಿದ್ದು, ನವೀನ್ ಹಲ್ಲೆಗೊಳಗಾದ ವ್ಯಕ್ತಿ.
ನವೀನ್ ರಸ್ತೆ ಪಕ್ಕದಲ್ಲಿ ಪೆಟ್ರೋಲ್ ಖಾಲಿಯಾಗಿತ್ತೆಂದು ಬೈಕ್ ನಿಲ್ಲಿಸಿದ್ದ. ಈ ವೇಳೆ ಆರೋಪಿ ಕಿರಣ್ ನಾಯಿ ಹಿಡಿದುಕೊಂಡು ಬರುತ್ತಿದ್ದನು. ಬಳಿಕ ಇದ್ದಕ್ಕಿದ್ದಂತೆ ನವೀನನ್ನು ಹೊಡೆದು ಕಿರಣ್ ಹಲ್ಲೆ ನಡೆಸಿದ್ದು, ನಂತರ ಸ್ಟೀಫನ್ ಕರೆಸಿ ಮತ್ತೆ ಹಲ್ಲೆಗೈದಿದ್ದಾರೆ. ಈ ವೇಳೆ ನವೀನ್ ಮೇಲೆ ಕಾಲಿನಿಂದ ಒದ್ದು, ರಕ್ತಬರುವಂತೆ ಕ್ರೂರತೆ ಮೆರೆದಿದ್ದಾರೆ.
ಸ್ಥಳೀಯ ಸಿಸಿಟಿವಿ ದೃಶ್ಯಗಳಲ್ಲಿ ಈ ಘಟನೆ ಸೆರೆಯಾಗಿದೆ. ಮಾಹಿತಿ ಪ್ರಕಾರ, ಸ್ಟೀಫನ್ ಈಗಾಗಲೇ ಕ್ರಿಮಿನಲ್ ಹಿಸ್ಟರಿ ಹೊಂದಿದ್ದು, ಮಾರಣಾಂತಿಕ ಹಲ್ಲೆ ಕೇಸ್‌ನಲ್ಲಿ ಸಿದ್ದಾಪುರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ. ಮತ್ತೋರ್ವ ಆರೋಪಿ ಕಿರಣ್ ಕಾಂಗ್ರೆಸ್ ಮುಖಂಡೆಯ ಪುತ್ರರಾಗಿದ್ದಾನೆ. ಇದೇ ಕಾರಣಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಸ್ಥಳೀಯರು ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಯುವತಿ ಮೇಲೆ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ | 10 ಸಾವಿರ ಲೂಟಿ!



















