ಬೀದರ್ : ಕಾರು ಮತ್ತು ಆಟೋ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಐವರಿಗೆ ಗಂಭೀರ ಗಾಯವಾಗಿರುವ ಘಟನೆ ಬಸವಕಲ್ಯಾಣ-ಮುಡಬಿ ರಸ್ತೆ ಮಧ್ಯೆ ನಡೆದಿದೆ.
ಪಂಜಣ್ಣ ಪೂಜಾರಿ (50) ಮೃತ ದುರ್ದೈವಿ. ಮುಡಬಿ ಗ್ರಾಮದಿಂದ ಬಸವ ಕಲ್ಯಾಣಕ್ಕೆ ಬರುತ್ತಿದ್ದ ಆಟೋಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಆಟೋದಲ್ಲಿದ್ದ 6 ಜನರ ಪೈಕಿ ಓರ್ವ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೀಪಕ್ ಎಂಬಾತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ರವಾನೆ ಮಾಡಲಾಗಿದೆ. ಅಪಘಾತ ಆಗುತ್ತಿದ್ದಂತೆ ಕಾರು ಚಾಲಕ ಪರಾರಿಯಾಗಿದ್ದಾನೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಪಾರಿವಾಳ ಹಿಡಯಲು ಹೋಗಿ ಮೊದಲನೆ ಮಹಡಿಯಿಂದ ಜಾರಿ ಬಿದ್ದ ಮಗು



















