ಬೈಕ್ ಹಾಗೂ ಮಿನಿ ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ನಡೆದಿರುವ ಘಟನೆ ಬೆಂಗಳೂರಿನ ಶ್ರೀನಿವಾಸಪುರ ಕ್ರಾಸ್ ಬಳಿ ನಡೆದಿದೆ.
ಬೆಳಿಗ್ಗೆ 8.30 ಕ್ಕೆ ಮಿನಿ ಟ್ಯಾಂಕರ್ ನ ಚಾಲಕ ಪಕ್ಕದಲ್ಲಿ ಸ್ಕೂಟರ್ ಇದ್ದಿದ್ದನ್ನು ಗಮನಿಸದೆ ಕ್ಯಾಂಟರ್ ಚಲಾಯಿಸಿದ್ದಾನೆ. ಪರಿಣಾಮವಾಗಿ ಸ್ಕೂಟರ್ ಮೇಲೆ ಕ್ಯಾಂಟರ್ ಹತ್ತಿ ಸ್ವಲ್ಪ ದೂರ ಕ್ರಮಿಸಿದೆ. ಆದರೆ, ಅದೃಷ್ಟವಶಾತ್ ಸ್ಕೂಟರ್ ನಲ್ಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೃಶ್ಯದ ಭೀಕರತೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಆರ್ ಆರ್ ನಗರ ಸಂಚಾರ ಠಾಣೆಯಲ್ಲಿ ಕ್ಯಾಂಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.