ಬೆಂಗಳೂರು: ಕಿರಾತಕರು ಚಾಕುವಿನಿಂದ ಹಸುಗಳಿಗೆ ಮನಬಂದಂತೆ ಕೊಯ್ದಿರುವ ಅಮಾನವೀಯ ಘಟನೆಯೊಂದು ನಡೆದಿದೆ.
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ(vinayak nagar) ಈ ಘಟನೆ ನಡೆದಿದೆ. ಗೋಮಾತೆಯನ್ನು ದೇವರೆಂದು ಭಾವಿಸಿ ಪೂಜೆ ಮಾಡುವ ಭಾರತೀಯ ಸಂಸ್ಕೃತಿಯಲ್ಲಿ ಈ ರೀತಿ ಆಕಳು ಕೊಯ್ದಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಇದರಿಂದಾಗಿ ಆಕಳು(cow)ವಿಲ ವಿಲ ಒದ್ದಾಡಿದೆ. ಕುಟುಂಬಸ್ಥರು ಆಸ್ಪತ್ರೆಗೆ(hospital) ಕರೆದುಕೊಂಡು ಹೋಗಲು ಯತ್ನಿಸಿದ್ದು, ಅದಕ್ಕೆ ನಡೆಯಲೂ ಆಗದಂತೆ ಒದ್ದಾಡಿದೆ. ಈ ಕತ್ಯಕ್ಕೆ ಕಾರಣರಾಗಿರುವ ಪಾಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗಾಯಗೊಂಡ ಹಸುಗಳಿಗೆ ಚಾಮರಾಜಪೇಟೆ(chamaraj pete) ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ರಕ್ತಸ್ರಾವ ನಿಲ್ಲುವುದಕ್ಕೆ ಹಾಗೂ ನೋವು ನಿವಾರಣೆಯ ಚುಚ್ಚುಮದ್ದು ನೀಡಲಾಗಿದೆ.