ಗದಗ: ಅಕಾಲಿಕ ಮಳೆಯಿಂದಾಗಿ ಕಂಗಾಲಾಗಿರುವ ರೈತರಿಗೆ ಈಗ ವಿದೇಶಿ ಪಕ್ಷಿಗಳ ಆತಂಕವೂ ಕಾಡುತ್ತಿದೆ.
ಗದಗ ಜಿಲ್ಲೆಯ ರೈತರಿಗೆ ಈ ಆತಂಕ ಶುರುವಾಗಿದೆ. ಹಿಂಡು ಹಿಂಡಾಗಿ ಬೇರೆ ದೇಶಗಳಿಂದ ಬರುವ ಪಕ್ಷಿಗಳು ಇಲ್ಲಿನ ಬೆಳೆಗಳನ್ನು ನಾಶ ಮಾಡಿ ಹೋಗುವುದಕ್ಕೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಿದೇಶದಿಂದ ಪಕ್ಷಿಗಳು ಬರುತ್ತಿವೆ. ಹಿಂದೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದ ಪಕ್ಷಿಗಳು, ಈಗ ಹೆಚ್ಚಾಗಿ ಲಗ್ಗೆಯಿಟ್ಟಿವೆ.
ಬೆಳಗ್ಗೆ ಹಾಗೂ ಸಂಜೆ ವೇಳೆ ಹಿಂಡು ಹಿಂಡಾಗಿ ಬಂದು ಬೆಳೆಗಳನ್ನು ತಿನ್ನುತ್ತಿವೆ. ಚಿಗುರೋಡೆದ ಕಡಲೆ, ಶೇಂಗಾ, ಸೇರಿದಂತೆ ಜಮೀನಿನಲ್ಲಿ ಬೆಳೆದ ಧಾನ್ಯಗಳನ್ನು ತಿಂದು ಹಾಕುತ್ತಿವೆ. ಹೀಗಾಗಿ ಬೆಳೆದ ಬೆಳೆ ಹಕ್ಕಿಗಳ ಪಾಲಾಗುತ್ತಿವೆ. ಹೀಗಾಗಿ ರೈತರು ವಿದೇಶಿ ಹಕ್ಕಿಗಳ ಕಾಟಕ್ಕೆ ಕಂಗಾಲಾಗಿದ್ದಾರೆ.
ಈ ವಿದೇಶಿ ಹಕ್ಕಿಗಳು ಚಳಿಗಾಲಕ್ಕೆ ಲಗ್ಗೆ ಇಡುತ್ತವೆ. ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ, ಪಾಕಿಸ್ತಾನದ ಲಡಾಕ್ ಸೇರಿದಂತೆ ಹಲವೆಡೆ ಪಕ್ಷಿಗಳು ಇಲ್ಲಿಗೆ ಪ್ರತಿ ವರ್ಷ ಆಗಮಿಸುತ್ತವೆ. ಬಾರ್ ಹಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ, ಪಾಂಟೆಡ್ ಸ್ಪಾರ್ಕ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಚಳಿಗಾಲದ ಸಂದರ್ಭದಲ್ಲಿ ಇಲ್ಲಿಗೆ ಬಂದು ಬೆಳೆಗಳನ್ನು ತಿಂದು ನಾಶ ಮಾಡಿ, ರೈತರನ್ನು ಕಂಗಾಲುಗೊಳಿಸಿ ಮರಳಿ ಹೋಗುತ್ತಿವೆ.
‘