ಕಾಡಾನೆ ದಾಳಿಯಿಂದ ಕಬ್ಬು ಬೆಳೆಗಾರರು ಕಂಗಲಾಗಿರುವ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ನಡೆದಿದೆ.
ರೈತ ಸುರೇಶ ಲೋಹಾರ್ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಗೆ ಕಾಡಾನೆಗಳ ಹಿಂಡು ನುಗ್ಗಿದ್ದು, ಸಂಪೂರ್ಣವಾಗಿ ನಾಶ ಮಾಡಿವೆ. ಬೆಳೆಯನ್ನು ಕಾಡಾನೆ ನಾಶ ಮಾಡಿದೆ. ಅಲ್ಲದೆ ಭೂತರಾಮನಹಟ್ಟಿ ಪ್ರದೇಶದಲ್ಲಿ ಗಜರಾಜನ ಉಪಟಳ ಹೆಚ್ಚಾಗಿದ್ದು, ಕಾಡಾನೆ ದಾಳಿಯಿಂದ ಮುಕ್ತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಒತ್ತಾಯಿಸಿದ್ದಾರೆ.



















