ಕಲಬುರಗಿ: ಸಾರಸ್ ಕಂಪನಿಯ 335 ಸೋಯಾ ಬಿತ್ತನೆ ಬೀಜ ಕಳಪೆ ಎಂದು ಕಲಬುರಗಿ ರೈತರು ಆರೋಪ ಮಾಡಿದ್ದಾರೆ.
ಮಹಾಗಾಂವ್ ರೈತ ಸಂಪರ್ಕ ಕೇಂದ್ರದಿಂದ ನೂರಾರು ಜನ ಸಾರಸ್ ಕಂಪನಿಯ 335 ಸೋಯಾ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆದು ಬೆಳೆ ಬಂದಿಲ್ಲವೆಂದು ರೈತರು ಆರೋಪಿಸಿದ್ದಾರೆ.

ಕಳಪೆ ಸೋಯಾ ಬಿತ್ತನೆ ಬೀಜದಿಂದ ರೈತರಿಗೆ ಆರ್ಥಿಕ ನಷ್ಟವಾಗಿದೆ ಎಂದು ಅನ್ನದಾತರು ಸಾರಸ್ ಕಂಪನಿ ಹಾಗೂ ಕೃಷಿ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.