ದಾವಣಗೆರೆ : ಟ್ರ್ಯಾಕ್ಟರ್ ರೋಟವೇಟರ್ ಯಂತ್ರಕ್ಕೆ ಸಿಲುಕಿ ರೈತ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ದಿದ್ದಿಗಿ ಗ್ರಾಮದ ನಾರಪ್ಪ (30) ರೋಟವೇಟರ್ ಯಂತ್ರ ಸಿಲುಕಿ ಸಾವನಪ್ಪಿದ ರೈತ.
ಎಂದಿನಂತೆ ರೈತ ನಾರಪ್ಪ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ರೋಟವೇಟರ್ ಹೊಡೆಸುತ್ತಿದ್ದರು. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ರೈತ ನಾರಪ್ಪ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಏಕಾಏಕಿ ಆತನ ಮೇಲೆ ರೋಟವೇಟರ್ ಯಂತ್ರ ಹರಿದಿದೆ. ಪರಿಣಾಮ ರೋಟವೇಟರ್ಗೆ ಸಿಕ್ಕ ರೈತನ ದೇಹ ಛಿದ್ರವಾಗಿದೆ.
ತಕ್ಷಣವೇ ಟ್ರ್ಯಾಕ್ಟರ್ ನಿಲ್ಲಿಸಿ ನೋಡಿದಾಗ ಸ್ಥಳದಲ್ಲೇ ರೈತ ನಾರಪ್ಪ ಕೊನೆಯುಸಿರೆಳೆದಿದ್ದರು. ಮನೆಗೆ ಆಧಾರವಾಗಿದ್ದ ರೈತ ನಾರಪ್ಪನನ್ನು ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನ ಸ್ಥಳಕ್ಕೆ ಜಗಳೂರಿನ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಸಂಬಂಧ ಹತ್ತಿರದ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮೈಸೂರಿನ ಫೇಮಸ್ ಹನುಮಂತು ಹೋಟೆಲ್‌ನಲ್ಲಿ ಕಿರಿಕ್ | ಎಂಟಕ್ಕೂ ಹೆಚ್ಚು ಮುಸ್ಲಿಂ ಯುವಕರಿಂದ ದಾಂಧಲೆ



















