ಗದಗ : ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರ ಬಂಧನವನ್ನು ಖಂಡಿಸಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಲಕ್ಷ್ಮೇಶ್ವರದ ಸೋಮೇಶ್ವರ ತೇರಿನ ಮನೆಯಿಂದ ಪ್ರಾರಂಭವಾದ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದೆ. ಶಾಸಕ ಬಂಧನ ಖಂಡಿಸಿ ಬೀದಿಗಿಳಿದ ಅಭಿಮಾನಿಗಳು, ಲಕ್ಷ್ಮೇಶ್ವರ–ಪಾಲಾ–ಬದಾಮಿ ರಸ್ತೆ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಕುತಂತ್ರದಿಂದ ಲೋಕಾಯುಕ್ತ ಟ್ರ್ಯಾಪ್ ಮಾಡಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಚಿವ ಹೆಚ್.ಕೆ ಪಾಟೀಲ್ ವಿರುದ್ಧವೂ ಷಡ್ಯಂತ್ರ ಆರೋಪ ಹೊರಿಸಿದ್ದಾರೆ.
ಚಂದ್ರು ಲಮಾಣಿ ಶಕ್ತಿಬಲಪಡಿಸುವ ನಿಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ ಅಭಿಮಾನಿಗಳು, ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೆ. 27ರಂದು ಶಾಸಕರಿಗೆ ಜಾಮೀನು ಸಿಗುವ ನಿರೀಕ್ಷೆಯಿದ್ದು, ಆ ದಿನ ಅದ್ದೂರಿ ಸಂಭ್ರಮಾಚರಣೆ ನಡೆಸುವುದಾಗಿ ಬೆಂಬಲಿಗರು ಘೋಷಿಸಿದ್ದಾರೆ. ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಮಕ್ಕಳಿಗೆ ಎಕ್ಸ್‌ಪೈರಿ ‘ಮಿಲೆಟ್ ಲಡ್ಡು’ ವಿತರಣೆ



















