ಉಡುಪಿ/ಬೆಂಗಳೂರು : ಹಿರಿಯ ಪ್ರಸಂಗಕರ್ತ ದಿವಂಗತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ ನೀಡುವುದಾಗಿ ಯಕ್ಷಗಾನ ಅಕಾಡೆಮಿ ಸಭೆಯಲ್ಲಿ ನಿರ್ಣಯವಾಗಿತ್ತು. ಈ ಕುರಿತು ಅಕಾಡೆಮಿಯಿಂದ ಕಂದಾವರ ರಘುರಾಮ ಶೆಟ್ಟಿ ಅವರಿಗೂ ಪೂರ್ವ ಮಾಹಿತಿ ನೀಡಲಾಗಿತ್ತು. ಆದರೆ ಮೊನ್ನೆ ಅಕಾಡೆಮಿಯ ಉಳಿದ ಎಲ್ಲಾ ಪ್ರಶಸ್ತಿ ಘೋಷಣೆಯಾಗಿದೆ. ಪಾರ್ತಿ ಸುಬ್ಬ ಪ್ರಶಸ್ತಿ ಮಾತ್ರ ಘೋಷಣೆಯಾಗಿಲ್ಲ. ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ ಘೋಷಣೆ ಯಾಕೆ ಮಾಡಿಲ್ಲ ಎಂದು ಈಗ ಆರೋಪಗಳು ಕೇಳಿ ಬಂದಿದೆ. ಕಂದಾವರ ರಘುರಾಮ ಶೆಟ್ಟಿ ಅವರು ಅಭಿಮಾನಿಗಳು ಯಕ್ಷಗಾನ ಅಕಾಡೆಮಿ ಅಧ್ಯಕ್ಷರ ವಿರುದ್ಧ ಈಗ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯಕ್ಷ ಅಕಾಡೆಮಿಯ ಸಭೆಯಲ್ಲಿ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಘೋಷಣೆ ಮಾಡದೇ ಇರುವುದು ಯಕ್ಷಗಾನಕ್ಕೆ ಮಾಡಿದ ಅವಮಾನ. ಕಂದಾವರ ರಘುರಾಮ ಶೆಟ್ಟರ ಅಭಿಮಾನಿಗಳಿಗೆ ಹಾಗೂ ಶಿಷ್ಯಂದಿರಿಗೆ ಮಾಡಿದ ಅವಮಾನ ಎಂಬ ಅಸಮಾಧಾನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಯಕ್ಷಗಾನಕ್ಕೆ ಅವಮಾನ ಮಾಡಿದ ಕನ್ನಡ ಸಂಸ್ಕ್ರತಿ ಇಲಾಖೆ ಸಚಿವರ ವಿರುದ್ಧ ಹಾಗೂ ಕುಕೃತ್ಯ ಮಾಡಿದ ಅಕಾಡೆಮಿ ಅಧ್ಯಕ್ಷರ ವಿರುದ್ಧ ಎಲ್ಲಾ ಯಕ್ಷಗಾನ ಅಭಿಮಾನಿಗಳು ಪ್ರತಿಭಟನೆ ಸಜ್ಜಾಗಲಿದ್ದೇವೆ. ನಾಡಿದ್ದು ಅಕಾಡೆಮಿಯ ಪ್ರಶಸ್ತಿ ಪ್ರದಾನದ ದಿನದಂದು ಸಾವಿರಾರು ಸಂಖ್ಯೆಯ ಯಕ್ಷಗಾನ ಅಭಿಮಾನಿಗಳೊಂದಿಗೆ, ಪ್ರಶಸ್ತಿ ಪ್ರಧಾನ ಸಮಾರಂಭದ ಸಭಾಂಗಣದ ಎದುರು ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂತಹ ಅವಮಾನ ಮಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಿಗೆ ನಮ್ಮ ದಿಕ್ಕಾರ. ಇಂತಹ ಹುಚ್ಚುತನದ, ಅಹಂಕಾರದ, ದರ್ಪದ ಜನ ಅಕಾಡೆಮಿ ಅಧ್ಯಕ್ಷರಾಗಲು ಅನರ್ಹರು. ಯಾವ ಯೋಗ್ಯತೆಯು ಇಲ್ಲದ ಇಂತವರಿಂದ ಯಕ್ಷಗಾನಕ್ಕೆ, ಯಕ್ಷಗಾನ ಕಲಾವಿದರಿಗೆ ಅವಮಾನ ಆಗುವ ಮುಂಚೆ ಅವರನ್ನು ಕೆಳಗಿಳಿಸಿ, ಯಕ್ಷಗಾನಕ್ಕೆ ನ್ಯಾಯ ಕೊಡಿಸಿ ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ; ಮೆಸ್ಸಿ ದರ್ಶನ ಸಿಗಲಿಲ್ಲ : ಕೋಲ್ಕತ್ತಾ ಕ್ರೀಡಾಂಗಣದಲ್ಲಿ ಅಭಿಮಾನಿಗಳ ದಾಂಧಲೆ, ಕುರ್ಚಿ-ಬಾಟಲಿ ತೂರಾಟ



















