ಆಕ್ಲೆಂಡ್ : ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಮತ್ತೊಮ್ಮೆ ಖಲಿಸ್ತಾನಿ ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಅವರ ಮುಂಬರುವ ಸಂಗೀತ ಕಚೇರಿಗೆ ಖಲಿಸ್ತಾನ್ ಪರ ಗುಂಪುಗಳಿಂದ ಬೆದರಿಕೆ ಇದೆ ಎಂದು ತಿಳಿದುಬಂದಿದೆ.
ಅಮೆರಿಕ ಮೂಲದ ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (SFJ) ನಿಂದ ಬೆದರಿಕೆಗಳು ಬಂದಿದೆ. ಈ ಸಂಘಟನೆಯು ಈ ಹಿಂದೆಯೂ ಗಾಯಕನನ್ನು ಗುರಿಯಾಗಿಸಿಕೊಂಡಿತ್ತು. ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ದೋಸಾಂಜ್ ಇದರ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ತಮ್ಮ ಸಂಗೀತ ಕಚೇರಿಯ ಹರ್ಷಚಿತ್ತದಿಂದ ಕೂಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.
ದಿಲ್ಜಿತ್ ದೋಸಾಂಜ್ ಅವರು ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಗಾಯಕ ಖಲಿಸ್ತಾನಿ ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗೌರವದ ಸೂಚಕವಾಗಿ ದೋಸಾಂಜ್ ಅವರು ಬಿಗ್‍ಬಿ ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟುವುದರ ಪ್ರೋಮೋ ವೈರಲ್ ಆದ ನಂತರ ಈ ಸಮಸ್ಯೆ ಪ್ರಾರಂಭವಾಗಿದೆ. ಅಕ್ಟೋಬರ್ 29ರಂದು SFJ ಅವರಿಗೆ ವಿರುದ್ಧ ಬೆದರಿಕೆ ಹಾಕಿತ್ತು. ಬಚ್ಚನ್ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಗಾಯಕ, 1984ರ ಸಿಖ್ ನರಮೇಧದ ಪ್ರತಿಯೊಬ್ಬ ಬಲಿಪಶು, ಪ್ರತಿಯೊಬ್ಬ ವಿಧವೆ ಮತ್ತು ಪ್ರತಿಯೊಬ್ಬ ಅನಾಥರನ್ನು ಅವಮಾನಿಸಿದ್ದಾರೆ ಎಂದು ಹೇಳಿಕೊಂಡಿತ್ತು.
ಇದನ್ನೂ ಓದಿ : ಉಡುಪಿ : ರೈತರೇ ಎಚ್ಚರ.. ಸರ್ಕಾರದ ಯೋಜನೆಯ ಹೆಸರಿನಲ್ಲಿ ಬರುತ್ತೆ APK ಫೈಲ್ | ಡೌನ್ಲೋಡ್ ಮಾಡಿದ್ರೆ ಮುಗೀತು ಕಥೆ!



















