ಕನ್ನಡ ಮತ್ತು ತಮಿಳು ಸೇರಿದಂತೆ ವಿವಿಧ ಭಾಷೆಯ ಹಾಡುಗಳನ್ನು ಹಾಡಿ ಜನಪ್ರಿಯತೆ ಪಡೆದಿರುವ ಖ್ಯಾತ ಗಾಯಕಿ ಅನನ್ಯಾ ಭಟ್ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸೋಜುಗಾದ ಸೂಜಿ ಮಲ್ಲಿಗೆ ಹಾಡಿನ ಮೂಲಕ ದೇಶಾದ್ಯಂತ ಜನಮನ್ನಣೆ ಗಳಿಸಿರುವ ಗಾಯಕಿ ಅನನ್ಯಾ ಭಟ್, ಡ್ರಮ್ಮರ್ ಮಂಜು ಕೈ ಹಿಡಿದಿದ್ದು, ತಿರುಪತಿಯಲ್ಲಿ ಮದುವೆ ಮಹೋತ್ಸವ ಅದ್ದರೂರಿಯಾಗಿ ನೆರವೇರಿದೆ. ಈ ಮುದ್ದಾದ ಜೋಡಿ ಡಾ.ಅರುಣ್ ಗುರೂಜಿ ನೇತೃತ್ವದಲ್ಲಿ ಹಸೆಮಣೆ ಏರಿದೆ.

ಜಾನಪದ ಗೀತೆಯ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಕಂಠದಿಂದ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿರುವ ಅನನ್ಯಾ ಹಾಡಿರುವ ಸೋಜುಗಾದ ಸೂಜುಮಲ್ಲಿಗೆ ಇವತ್ತಿಗೂ ಯೂಟ್ಯೂಬನಲ್ಲಿ ವೀಕ್ಷಣೆ ಪಡೆಯುತ್ತಿದೆ. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನನ್ಯಾ ಭಟ್ ಅವರಿಗೆ ಸಿನಿಮಾ ತಾರೆಯರು, ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇದನ್ನೂ ಓದಿ : ಜಲಪಾತ ವೀಕ್ಷಣೆಗೆ ತೆರಳಿದ್ದಾಗ ದುರಂತ | ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು!


















