ವೃತ್ತಿಪರ ಕುಸ್ತಿ ಸೂಪರ್ ಸ್ಟಾರ್ ಹಲ್ಕ್ ಹೋಗನ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಸ್ಟಾರ್ಗಳಲ್ಲಿ ಹೋಗನ್ ಕೂಡ ಒಬ್ಬರು. ಅವರು ತಮ್ಮ 71ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. WWE ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳಲ್ಲಿ ಹೋಗನ್ ಕೂಡ ಒಬ್ಬರಾಗಿದ್ದರು.
ಅಮೇರಿಕನ್ ವೆಬ್‌ಸೈಟ್ TMZ ವರದಿಯ ಪ್ರಕಾರ, ಹಲ್ಕ್ ಹೋಗನ್ ತಮ್ಮ ಫ್ಲೋರಿಡಾದ ಮನೆಯಲ್ಲಿ ನಿಧನರಾಗಿದ್ದಾರೆ. ಹೋಗನ್ ಕಳೆದ ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎನ್ನಲಾಗಿದೆ. ಹೋಗನ್ 1983 ರಲ್ಲಿ WWE ಪ್ರವೇಶಿಸಿದ್ದರು. ಸುಮಾರು 6.5 ಅಡಿ ಎತ್ತರ ಮತ್ತು 130 ಕೆಜಿ ತೂಕವಿದ್ದ ಹೋಗನ್, ತಮ್ಮ WWE ವೃತ್ತಿಜೀವನದಲ್ಲಿ ಆರು ಬಾರಿ WWE ಚಾಂಪಿಯನ್‌ಶಿಪ್ ಮತ್ತು ಆರು ಬಾರಿ WCW ವರ್ಲ್ಡ್ ಹೆವಿವೇಟ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. 2012 ರ ಜನವರಿಯಲ್ಲಿ ಕುಸ್ತಿಯಿಂದ ನಿವೃತ್ತರಾಗಿದ್ದರು.



















