ಕಲಬುರಗಿ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೋರ್ವ ಪತ್ನಿ, ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದ ಗಾಬರೆ ಲೇಔಟ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಕೊರಳ್ಳಿ (45) ಕೊಲೆ ಮಾಡಿ ಯಾತ್ಮಹತ್ಯೆ ಮಾಡಿಕೊಂಡವ ಎನ್ನಲಾಗಿದೆ. ಹತ್ಯೆಯಾದವರನ್ನು ಪತ್ನಿ ಶೃತಿ (35), ಮಕ್ಕಳನ್ನು ಮುನಿಶ್ (9), ಮೂರು ತಿಂಗಳ ಮಗುವನ್ನು ಅನಿಶ್ ಎಂದು ಗುರುತಿಸಲಾಗಿದೆ.
ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಜಗಳದಿಂದ ಬೇಸತ್ತ ಸಂತೋಷ್ ಕೊರಳ್ಳಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.