ಬೆಂಗಳೂರು : ಕೌಟುಂಬಿಕ ಕಲಹದಿಂದ ಪತಿ-ಪತ್ನಿಯನ್ನ ಒಂದೂಗೂಡಿಸಲು ಮಾತುಕತೆಗೆಂದು ಕರೆಸಿ ಹತ್ಯೆಗೈದ ಘಟನೆ ಬೆಂಗಳೂರಿನ ಕೆ. ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಮ್ಮದ್ ಶಕೀಲ್ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಮಹಮ್ಮದ್ ಶಕೀಲ್ ಮತ್ತು ರಜೀಯಾ ಸುಲ್ತಾನಾ ಇಬ್ಬರು ದಂಪತಿಗಳಾಗಿದ್ದು, ಇವರ ನಡುವೆ ಕಲಹವಿತ್ತು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿ ತನಿಖೆ ನಡೆಯುತ್ತಿತ್ತು. ಇದೇ ವೇಳೆ ಜಗಳ ಬಗೆಹರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಲು ಕೆಜಿ ಹಳ್ಳಿಯ ಬಿಲಾಲ್ ಮಸೀದಿ ಬಳಿಯ ಎಂಎಂ ಅಪಾರ್ಟ್ಮೆಂಟ್ ನ ಬೇಸ್ಮೆಂಟ್ ಗೆ ಕರೆಯಲಾಗಿತ್ತು. ಈ ವೇಳೆ ಮಹಮ್ಮದ್ ಶಕೀಲ್ ಜೊತೆಗೆ ಮಾತನಾಡುವಾಗ ಮತ್ತೆ ಗಲಾಟೆ ನಡೆದಿದ್ದು, ಜಬಿಉಲ್ಲಾ ಖಾನ್, ಇಮ್ರಾನ್ ಖಾನ್, ಮತ್ತು ಫಯಾಜ್ ಖಾನ್ ಹಲ್ಲೆಗೈದಿದ್ದಾರೆ.
ಹಲ್ಲೆ ಹಿನ್ನಲೆ ಅಲ್ಲಿಯೆ ಕುಸಿದು ಬಿದ್ದಿದ್ದ ಶಕೀಲ್ ಸಾವನಪ್ಪಿದ್ದು, ಘಟನಾ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿತ್ತಿದ್ದಾರೆ. ಇದನ್ನೂ ಓದಿ : ಟ್ಯೂಶನ್ ಮುಗಿಸಿ ಮನೆಗೆ ಬರ್ತಿದ್ದ ಬಾಲಕಿ ಮೇಲೆ ಗುಂಡಿನ ದಾಳಿ | ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ



















