ನವದೆಹಲಿ: ಭಾರತದಲ್ಲಿ ಬಡತನ ಹಾಗೂ ಕಡುಬಡತನದ (extreme poverty) ಪ್ರಮಾಣ ಇಳಿಕೆ ಕಂಡು ಬಂದಿದೆ. ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶದ ಪ್ರಕಾರ ಬಡತನ ತಗ್ಗಿದೆ.
2011-12ರಲ್ಲಿ ಶೇ. 27.1ರಷ್ಟಿದ್ದ ಕಡು ಬಡತನವು 2022-23ರಲ್ಲಿ ಶೇ. 5.3ಕ್ಕೆ ಇಳಿದಿದೆ. 2011-12ರಲ್ಲಿ 34.45 ಕೋಟಿ ಜನರು ಅತಿಬಡತನ ಎದುರಿಸಿದ್ದಾರೆ. 2022-23ರಲ್ಲಿ ಆ ಸಂಖ್ಯೆ 7.52 ಕೋಟಿಗೆ ಇಳಿಕೆ ಕಂಡಿದೆ.
ಒಬ್ಬ ವ್ಯಕ್ತಿಯ ಒಂದು ದಿನದ ಆದಾಯ 3 ಡಾಲರ್ (ಸುಮಾರು 250 ರೂ) ಮಟ್ಟಕ್ಕಿಂತ ಕಡಿಮೆ ಇದ್ದರೆ ಅದನ್ನು ಅತಿಬಡತನ ಎಂದು ಪರಿಗಣಿಸಲಾಗುತ್ತದೆ.