ಬೆಂಗಳೂರು : ಆಟೋ ಬುಕ್ ಮಾಡಿ ಚಾಲಕನ ಸುಲಿಗೆ ಮಾಡಿರುವ ಮೂವರು ಆರೋಪಿಗಳನ್ನು ಆವಲಹಳ್ಳಿ ಪೊಲೀಸರ ಬಂಧಿಸಿದ್ದಾರೆ.
ಪವನ್ ಯಾನೆ ಪಾಂಡು (22), ಅಪ್ರೋಜ್ ಯಾನೆ ಮುಸ್ತಾನ್, ಮನೋಜ್ (26) ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 12 ಲಕ್ಷ ಮೌಲ್ಯದ 1 ಆಟೋ ರೀಕ್ಷಾ, 11 ಬೈಕ್, 22.9 ಗ್ರಾಂ ಚಿನ್ನಾಭರಣವನ್ನು ವಶಕ್ಕ ಪಡೆಯಲಾಗಿದೆ.
ಆರೋಪಿಗಳು ಆಗಸ್ಟ್ 18ರಂದು ಬೆಳಗಿನ ಜಾವ ರಾಮಮೂರ್ತಿ ನಗರದಿಂದ ಹೊಸಕೋಟೆಗೆ ರ್ಯಾಪಿಡೋ ಆಟೋ ಬುಕ್ ಮಾಡಿದ್ದಾರೆ. ಬುಕ್ ಮಾಡಿದಾಗ ಸ್ಥಳಕ್ಕೆ ಬಂದಿದ್ದ ಬಿಹಾರ ಮೂಲದ ಚಾಲಕ ರಾಜೇಶ್ ಕುಮಾರ್ ಓಟಿಪಿ ಹೇಳುತ್ತಿದ್ದಂತೆ ಆರೋಪಿಗಳು ಲೊಕೇಷನ್ ಚೇಂಜ್ ಮಾಡಿ, ಆವಲಹಳ್ಳಿ ಆದೂರು ಬಳಿಗೆ ಡ್ರಾಪ್ ಮಾಡುವಂತೆ ಹೇಳಿದ್ದಾರೆ.
ಬಳಿಕ ಆದೂರು ಬಳಿಯ ಪಟ್ಟಲಮ್ಮ ದೇಗುಲದ ಬಳಿ ಇಳಿದಿದ್ದ ಆರೋಪಿಗಳು ಚಾಕು ತೋರಿಸಿ ಆಟೋ ಚಾಲಕನಿಂದ ಹಣಕ್ಕೆ ಬೇಡಿಕೆ ಇಟ್ಟು, ಫೋನ್ ಪೇ ಮೂಲಕ 50 ಸಾವಿರ ಹಾಕಿಸಿಕೊಂಡು, ಆಟೋ ರಿಕ್ಷಾ ಸಮೇತ ಪರಾರಿಯಾಗಿದ್ದರು.
ಬಳಿಕ ಆಟೋ ಚಾಲಕ ರಾಜೇಶ್ ಕುಮಾರ್ ಅವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ, ದೂರು ದಾಖಲಿಸಿಕೊಂಡು ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ಮಾಡುವಾಗ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿರುವುದು ಬೆಳಕಿಗ ಬಂದಿದೆ.