ಮಹಾರಾಷ್ಟ್ರ ಸಿಎಂ ಆಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅಧಿಕಾರದ ಗದ್ದುಗೆ ಏರಿ ಈಗಾಗಲೇ ಒಂದು ವಾರವೇ ಕಳೆದಿದೆ. ಆದರೆ, ಇದುವರೆಗೂ ಸಚಿವ ಸಂಪುಟದ ಹಗ್ಗ-ಜಗ್ಗಾಟ ಪೂರ್ತಿ ಅಂತ್ಯ ಕಂಡಿಲ್ಲ. ಸದ್ಯದ ಮಾಹಿತಿಯಂತೆ ಸಚಿವ ಸ್ಥಾನಗಳ ಹೊಂದಾಣಿಕೆ ಕಾರ್ಯ ಪೂರ್ಣವಾಗಿದೆ ಎನ್ನಲಾಗಿದೆ.
ಮೂಲಗಳಿಂದ ತಿಳಿದು ಬಂದ ಮಾಹಿತಿಯಂತೆ, ಡಿಸೆಂಬರ್ 14 ರಂದು ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಈ ವೇಳೆ 35 ಜನರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿಗೆ 21 ಖಾತೆಗಳು, ಶಿವಸೇನೆ ಶಿಂಧೆ ಗುಂಪು 13 ಮತ್ತು ಎನ್ ಸಿಪಿ ಅಜಿತ್ ಪವಾರ್ ಬಣಕ್ಕೆ 9 ಸಚಿವ ಸ್ಥಾನಗಳು ಸಿಗಲಿವೆ ಎನ್ನಲಾಗುತ್ತಿದೆ.
ಮೊದಲ ಹಂತದಲ್ಲಿ 35 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಪೈಕಿ ಬಿಜೆಪಿ 17, ಶಿವಸೇನೆ 10 ಮತ್ತು ರಾಷ್ಟ್ರೀಯವಾದಿ ಅಜಿತ್ ಪವಾರ್ ಬಣದ 7 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಹಣಕಾಸು ಮತ್ತು ಗೃಹ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಳ್ಳಲಿದೆ. ಆದರೆ, ಈ ಬಾರಿ ಗೃಹ ಹಾಗೂ ಹಣಕಾಸು ಸಚಿವ ಸ್ಥಾನ ಸಿಎಂ ಬಳಿ ಇರಲಿವೆ.
ಏಕನಾಥ್ ಶಿಂಧೆಗೆ ನಗರಾಭಿವೃದ್ಧಿ ಮತ್ತು ಕಂದಾಯ ಖಾತೆ, ಅಜಿತ್ ಪವಾರ್ ಗೆ ವಸತಿ ಮತ್ತು ಸಾರ್ವಜನಿಕ ಕಾರ್ಯಗಳ ಪ್ರಮುಖ ಖಾತೆ ನೀಡಲಾಗಿದೆ ಎಂದು ತಿಳಿದು ಬಂದಿದೆ.