ಬೆಳಗಾವಿ : ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಥೆರಪಿಸ್ಟ್ ಕೊಲೆ ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದ್ದು, ಪತ್ನಿಯೇ ಬಾಯ್‌ಫ್ರೆಂಡ್ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಖಾಸಗಿ ಆಯುರ್ವೇದಿಕ್ ಕಾಲೇಜಿನಲ್ಲಿ ಥೆರಪಿಸ್ಟ್ ಆಗಿದ್ದ ಅವಿನಾಶ ಸೂಪ್ಪಣ್ಣವರ (40) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಅವಿನಾಶನ ಪತ್ನಿ ಲಕ್ಷ್ಮಿ ಸೂಪ್ಪಣ್ಣವರ ಹಾಗೂ ಆಕೆಯ ಬಾಯ್‌ಫ್ರೆಂಡ್ ಕೈಲಾಸ್ ಅಚ್ಚಿತಾಲ್ ನನ್ನು ಬಂಧಿಸಲಾಗಿದೆ.
ತನಿಖೆಯ ಪ್ರಕಾರ, ಆರೋಪಿ ಮಹಿಳೆ ತಂಪು ಪಾನೀಯದಲ್ಲಿ ಮೂರು ನಿದ್ರೆ ಮಾತ್ರೆಗಳು ಹಾಕಿ ಪತಿಗೆ ನೀಡಿದ್ದಾಳೆ. ನಂತರ ಅವರು ಪತಿ ಬಿದಿದ್ದು, ಬಳಿಕ ಸಿಲಿಂಡರ್ ತಲೆಯ ಮೇಲೆ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೊಲೆಯನ್ನು ಸಹಜ ಸಾವಿನಂತೆ ಬಿಂಬಿಸಲು ಯತ್ನ ನಡೆದಿದ್ದರೂ, ಮೃತನ ತಾಯಿ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ತನಿಖೆಯಿಂದ ಅಕ್ರಮ ಸಂಬಂಧ ಮತ್ತು ಪೂರ್ವನಿಯೋಜಿತ ಕೊಲೆ ಸಂಚು ಬಯಲಾಗಿದೆ. ಟಿಳಕವಾಡಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಇನ್ನೂ ತನಿಖೆಯಲ್ಲಿದೆ.
ಇದನ್ನೂ ಓದಿ : ಪ್ರೀತಿ ಹೆಸರಲ್ಲಿ ಯುವತಿ ವಂಚನೆ ಆರೋಪ – ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ


















