ಹಾಸನ : ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು ನಿಯಮಾವಳಿ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು, ಅಧಿಕಾರಿಗಳ ಮಾತು ಕೇಳಿ ಎಡವಿದ್ದಾರೆಂದು ಮಾಜಿ ಸಚಿವ ಬಿ.ಶಿವರಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಸುತ್ತೋಲೆಯು ಬಗರ್ ಹುಕುಂ ಸಾಗುವಳಿದಾರ ರೈತನಿಗೆ ಕಂಟಕವಾಗಿದೆ. ಇದರಿಂದ ಬಡ ರೈತರಿಗೆ ಅನ್ಯಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಗರ್‌ಹುಕುಂ ಭೂಮಿ ಮಂಜೂರಾತಿಗೆ ಇದ್ದ ಸಮಿತಿ ಅಧಿಕಾರ ಮೊಟಕು ಮಾಡಲಾಗಿದೆ. ಸ್ಥಳೀಯ ವಿಧಾನಸಭಾ ಸದಸ್ಯರ ಹೊರತಾಗಿಯೂ ಅರ್ಜಿ ವಜಾಗೊಳಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಧಿಕಾರಿಗಳು ನಿಯಮಾವಳಿಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳದೆ ಅರ್ಜಿ ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಂದಾಯ ಇಲಾಖೆ ಸುತ್ತೋಲೆ ಬಗ್ಗೆ ಯಾವುದೇ ಶಾಸಕರು, ಸಚಿವರು ಗಮನಹರಿಸಿಲ್ಲ. ಎಷ್ಟೋ ಶಾಸಕರಿಗೆ ಸುತ್ತೋಲೆಯ ಮಾಹಿತಿ ಗೊತ್ತಿಲ್ಲ. ಕಂದಾಯ ಸಚಿವ ಕೃಷ್ಣಭೈರೇಗೌಡರನ್ನು ಅಧಿಕಾರಿಗಳು ದಿಕ್ಕು ತಪ್ಪಿಸಿದ್ದು, ಸಚಿವರು ಕೂಡ ಅರ್ಥಮಾಡಿಕೊಳ್ಳದೆ ಉಡಾಫೆ ಉತ್ತರ ನೀಡುತ್ತಾ ಆಗಿ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.