ಬೆಂಗಳೂರು: ಪ್ರೇಯಸಿಯ ಲವರ್ ಗೆ ಮಾಜಿ ಬಾಯ್ ಫ್ರೆಂಡ್ ಚಾಕು ಇರಿದಿರುವ ಘಟನೆಯೊಂದು ನಡೆದಿದೆ.
ಬೆಂಗಳೂರಿನ (Bengaluru) ವೈಯಾಲಿ ಕಾವಲ್ (Vyalikaval) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಂದನ್ ಎಂಬ ವ್ಯಕ್ತಿಗೆ ಯತೀಶ್ ಚಾಕು ಇರಿದಿದ್ದಾನೆ. ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜಟಕಾ ಸ್ಟ್ಯಾಂಡ್ ಹತ್ತಿರ ಈ ಘಟನೆ ನಡೆದಿದೆ.
ಚಂದನ್ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಯುವತಿ ಚಂದನ್ ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಅಲ್ಲದೇ, ಹಿಂದೆ ಯತೀಶ್ ನನ್ನು ಪ್ರೀತಿಸುತ್ತಿದ್ದಳಂತೆ. ಈ ವಿಚಾರ ಯತೀಶ್ ಗೆ ತಿಳಿದು ಮಾತುಕತೆಗೆಂದು ಚಂದನ್ ನನ್ನು ಕರೆದಿದ್ದಾನೆ. ಬರುತ್ತಿದ್ದಂತೆ ಯತೀಶ್ ಮತ್ತು ಆತನ ಸಹಚರರು ಚಾಕು ಇರಿದಿದ್ದಾರೆ.
ರಕ್ತಸಿಕ್ತನಾಗಿ ನಿತ್ರಾಣಗೊಂಡಿದ್ದ ಚಂದನ್ ತನ್ನ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಂದನ್ ಸ್ಥಿತಿ ಗಂಭೀರವಾಗಿದ್ದು, ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.