ಬೆಂಗಳೂರು : ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಜಿಲ್ಲೆಯ ಶಾಸಕರು ಮತ್ತು ಮಂತ್ರಿಗಳ ಸಭೆ ಮಾಡಿದ್ದಾರೆ. ಸುಮಾರು ಅರ್ಧ ಗಂಟೆ ಸಭೆ ಆಗಿದೆ. ಜಿಲ್ಲೆಯ ಅಭಿವೃದ್ಧಿ, ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಮಳೆಗಾಲದಲ್ಲಿ ಎಲೆ ಚುಕ್ಕಿ ರೋಗದ ಜೊತೆಗೆ ಕೊಳೆ ರೋಗ ಕಾಡುತ್ತಿದೆ. ಮಳೆಯಿಂದಾಗಿ ರಸ್ತೆ ಹಾಳಾಗಿದೆ. ಬೇರೆಯವರಿಗೆ ಹೆಚ್ಚು ಅನುದಾನ ಕೊಡುತ್ತೀರಿ. ನಮ್ಮ ಜಿಲ್ಲೆಗೂ ಹೆಚ್ಚು ಅನುದಾನ ನೀಡಿ ಎಂದಿದ್ದೇನೆ. ಸಿಎಂ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.
ಉಸ್ತುವಾರಿ ಸಚಿವರು ಸಹ ಸಹಕರಿಸಿದ್ದಾರೆ. ನಮ್ಮ ಮಂತ್ರಿಗಳು ಚೆನ್ನಾಗಿ ಸ್ಪಂದನೆ ಮಾಡುತ್ತಿದ್ದಾರೆ. ಸ್ಪಂದನೆ ಮಾಡದಿದ್ದರೆ ಯಾವ ಮಂತ್ರಿಗೂ ಬಿಡಲ್ಲ. ಉಸ್ತುವಾರಿ ಸುರ್ಜೇವಾಲ ಸಭೆ ಬಳಿಕ ಎಲ್ಲಾ ಸರಿಹೋಗಿದೆ ಎಂದು ಅವರು ಹೇಳಿದ್ದಾರೆ.