ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ಗೆ ಹಾರಿದ್ದಾರೆ. ಅಮೆರಿಕದಲ್ಲೇ ನೆಲೆ ನಿಂತಿರುವ ಅವರು, ಈಗ ಮತ್ತೆ ಭಾರತೀಯ ಚಿತ್ರದತ್ತ ಮರಳಿದ್ದಾರೆ. ಆದರೆ, ಈಗ ಅವರ ಸಂಭಾವನೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ರಾಜಮೌಳಿ (Rajamouli) ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಿತ್ರದಲ್ಲಿ ಮಹೇಶ್ ಬಾಬು (Mahesh Babu) ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗಲು ಪ್ರಿಯಾಂಕ್ ಬರೋಬ್ಬರಿ 30 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಿಯಾಂಕಾಗೆ 42 ವರ್ಷ ಆಗಿದ್ದರೂ ಅವರ ಚಾರ್ಮ್ ಮಾತ್ರ ಕಡಿಮೆಯಾಗಿಲ್ಲ. ಅವರ ಸೌಂದರ್ಯಕ್ಕೆ ಸರಿಸಾಟಿಯೇ ಇಲ್ಲ ಎನ್ನುವಂತ ಮಾತಿದೆ. ಹೀಗಾಗಿ ಪ್ರಿಯಾಂಕಾಗೆ ಹಾಲಿವುಡ್ ನಲ್ಲೂ ಬೇಡಿಕೆ ಇದೆ. ಬಹುನಿರೀಕ್ಷಿತ ಸಿನಿಮಾ ರಾಜಮೌಳಿ ಮತ್ತು ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ 30 ಕೋಟಿ ರೂ. ಕೇಳಿದ್ದಾರೆ. ಅದಕ್ಕೆ ಚಿತ್ರತಂಡ ಕೂಡ ಸಮ್ಮತಿ ಸೂಚಿಸಿದೆ ಎನ್ನಲಾದ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ.
ಒಂದು ವೇಳೆ ನಟಿ ಪ್ರಿಯಾಂಕಾ ಇಷ್ಟೊಂದು ಸಂಭಾವನೆ ಪಡೆದರೆ, ಇದು ದಾಖಲೆಯ ಸಂಭಾವನೆಯಾಗಲಿದೆ. ಏಕೆಂದರೆ, ಭಾರತದ ಯಾವುದೇ ನಟಿ ಇಷ್ಟೊಂದು ಸಂಭಾವನೆ ಪಡೆದಿಲ್ಲ. ಈ ಚಿತ್ರದ ಶೂಟಿಂಗ್ ಕೂಡ ಈಗಾಗಲೇ ಶುರುವಾಗಿದೆ ಎಂದು ತಿಳಿದು ಬಂದಿದೆ.