ಬಂಗಾರದ ಬೆಲೆ ಕೈಗೆಟುಕದಂತೆ ಏರಿದರೂ ಅಕ್ಷಯ ತೃತೀಯದ ಖರೀದಿ ಭರಾಟೆ ಮಾತ್ರ ಕಮ್ಮಿ ಆಗಿಲ್ಲ.
ಅಕ್ಷಯ ತೃತೀಯದ ಅಪರೂಪದ ಮುಹೂರ್ತದಲ್ಲಿ ಚಿನ್ನ ಖರೀದಿಸುವ ಭಾರತೀಯರ ಪರಂಪರೆ ಬಂಗಾರ 1 ಲಕ್ಷ ತಲುಪಿದರೂ ಕುಗ್ಗಿಲ್ಲ.
ಈ ಬಾರಿ ತೃತೀಯದ ಹಿನ್ನೆಲೆಯಲ್ಲಿ ಚಿನಿವಾರ ಪೇಟೆ 16 ಸಾವಿರ ಕೋಟಿಗಳ ವಹಿವಾಟನ್ನು ನಿರೀಕ್ಷಿಸಿದೆ. ಪ್ರತಿ ಹತ್ತು ಗ್ರಾಂ ಬಂಗಾರ 1 ಲಕ್ಷದ ಗಡಿ ದಾಟಿದರೂ ಉದ್ಯಮ ಮಾತ್ರ, ಭಾರೀ ವಹಿವಾಟಿನ ನಿರೀಕ್ಷೆಯಲ್ಲಿ ಕಾದು ಕುಳಿತಿದೆ. ಅಂದಾಜು, 12 ಟನ್ ಬಂಗಾರವಿಂದು ಮಾರಾಟವಾಗುವ ಲೆಕ್ಕ ಹಾಕಲಾಗಿದ್ದು, ಇದರ ಮೌಲ್ಯ 12 ಸಾವಿರ ಕೋಟಿ ದಾಟುತ್ತೆ ಎನ್ನಲಾಗಿದೆ.
ಉಳಿದಂತೆ 400 ಟನ್ ಬೆಳ್ಳಿ ವಹಿವಾಟಿನ ಗುರಿ ಹೊಂದಲಾಗಿದ್ದು, ಇದರ ಮೌಲ್ಯ 4 ಸಾವಿರ ಕೋಟಿಯಷ್ಟಾಗಲಿದೆ. ಈ ಮೂಲಕ ಚಿನ್ನದ ಉದ್ಯಮ 16 ಸಾವಿರ ಕೋಟಿಯ ವ್ಯಾಪಾರಕ್ಕೆ ಸಜ್ಜಾಗಿದೆ.