ಪ್ರಯತ್ನ ಫಲ ನೀಡದಿದ್ದರೂ ಪ್ರಾರ್ಥನೆ ಫಲ ನೀಡುತ್ತೆ. ಯೆಸ್, ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಮತ್ತೆ ಸಂಚಲನ ಮೂಡಿಸಿದ್ದಾರೆ. ಆಷಾಢ ಶುಕ್ರವಾರದ ಶುಭದಿನದಂದು ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದ ಡಿಸಿಎಂ, ಆ ತಾಯಿಗೆ ನಾನು ಏನು ಕೇಳಿಕೊಳ್ಳಬೇಕೋ ಕೇಳಿಕೊಂಡಿದ್ದೇನೆ.
ಇನ್ನೇನಿದ್ದರು ಫಲದ ನಿರೀಕ್ಷೆ ಅಂತಾ ಹೇಳುವ ಮೂಲಕ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿಎಂ ಕುರ್ಚಿಗೆ ಟವೆಲ್ ಹಾಕಿದ್ದಾರಾ ಅನ್ನೋ ಅನುಮಾನ ಮೂಡಿಸಿದ್ದಾರೆ. ಪತ್ನಿ, ಪುತ್ರಿ ಜೊತೆ ಶಕ್ತಿ ದೇವತೆ ದರ್ಶನ ಪಡೆದ ಡಿಕೆಶಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಮಗೆಲ್ಲಾ ನಮ್ಮ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಬುದ್ಧಿವಾದ ಹೇಳಿದ್ದಾರೆ. ನಾವೆಲ್ಲಾ ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೀವಿ ಅಂತಾ ಕುತೂಹಲ ಕೆರಳಿಸಿದ್ದಾರೆ. ಹಾಗಿದ್ದರೆ ಸಿಎಂ ಕುರ್ಚಿ ಕೊಡಿಸುವ ವಾಗ್ದಾನ ಮಾಡಿದ್ದಾರಾ? ಮಲ್ಲಿಕಾರ್ಜುನ ಖರ್ಗೆ ಅನ್ನೋದು ಡಿಕೆಶಿಯವರು ಮಾತಿನಿಂದ ಹೊಸ ಕುತೂಹಲ ಕೆರಳಿಸಿದೆ.