ಬೆಂಗಳೂರು : ಅಬ್ದುಲ್ ಕಲಾಂ ಅವರು ತಮ್ಮದೇ ಆದ ಸೇವೆಯನ್ನು ಮಾಡಿದ್ದಾರೆ. ಅಬ್ದುಲ್ ಕಲಾಂ ಹೆಸರಲ್ಲಿ ಸ್ಟಾರ್ಟಪ್ ಅವಾರ್ಡ್ ಸ್ಥಾಪಿಸಬೇಕು ಎಂದು ಅಲ್ಪಸಂಖ್ಯಾತ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಆ ಪುಣ್ಯಾತ್ಮನ ಹೆಸರಲ್ಲಿ ಅವಾರ್ಡ್ ಪ್ರಾರಂಭ ಮಾಡುತ್ತೇವೆ. ಮೋದಿಜಿ ಅವರು 2040ಕ್ಕೆ ಅಭಿವೃದ್ಧಿ ಆಗಬೇಕು ಅಂದರೆ ದೇಶದಲ್ಲಿರುವ ಪ್ರತಿಯೊಬ್ಬರ ಕೊಡುಗೆ ಇರಬೇಕು. ಮೋದಿಜಿ ಅವರ ಕನಸು ನನಸಾಗಬೇಕು ಅಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು. ಬಿಜೆಪಿ ಅಂದರೆ ಅಲ್ಪಸಂಖ್ಯಾತ ವಿರೋಧಿಗಳು ಎಂದು ಕಾಂಗ್ರೆಸ್ ಮುಂಚೂಣಿಗೆ ತರಲು ಪ್ರಯತ್ನ ಮಾಡುತ್ತಿದೆ.
ಆದರೆ ನಾವು ಯಾರೂ ಕೂಡ ಅಲ್ಪಸಂಖ್ಯಾತರ ವೀರೋಧಿಗಳಲ್ಲ. ಯಾವತ್ತೂ ಕೂಡ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ. ಯಡಿಯೂರಪ್ಪ ಅವರ ಕಾಲದಲ್ಲೂ ಕೂಡ ಅಲ್ಪಸಂಖ್ಯಾತರಿಗೆ ಯಾವುದೇ ಅನ್ಯಾಯ ಆಗಿಲ್ಲ. ದೇಶದಲ್ಲಿ ಅಲ್ಪಸಂಖ್ಯಾತರು ಮುಂಚೂಣಿಗೆ ಬರದೇ ಬಡವರಾಗಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಅವರು ಹೇಳಿದ್ದಾರೆ.
ಬರೀ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಮೋದಿಜಿ ಆವರು ಎಲ್ಲರಿಗೂ ಕೊಟ್ಟಿದ್ದಾರೆ. ದೇಶ ಅಭಿವೃದ್ಧಿ ಆದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ಸ್ ಗೂ ಲಾಭ ಆಗುತ್ತದೆ. ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.
ಆಪರೇಷನ್ ಸಿಂಧೂರ್ ಬಗ್ಗೆ ಎಲ್ಲಾರು ಭಾಷಣ ಮಾಡ್ತಿದ್ರು, ಆದ್ರೆ ರಾಹುಲ್ ಗಾಂಧಿಗೆ,ಕಾಂಗ್ರೆಸ್ ಅವ್ರ್ಗೆ ಪ್ರಧಾನ ಮಂತ್ರಿ ಬಗ್ಗೆ ವಿಶ್ವಾಸ ಇಲ್ಲ. ರಾಹುಲ್ ಗಾಂಧಿ ಅವ್ರು ದೇಶದ ಫಾರಿನ್ ಪಾಲಿಸಿ ಪ್ರಶ್ನೆ ಮಾಡ್ತಾರೆ. ಚುನಾವಣಾ ಆಯೋಗವನ್ನ ಅನುಮಾನ ಪಡ್ತಾರೆ. ಈಗ ಆಪರೇಷನ್ ಸಿಂಧೂರದ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ. ದೇಶದಲ್ಲಿ ಅನೇಕರು ಅನುಕಂಪದ ಮೇಲೆ ಪ್ರಧಾನ ಮಂತ್ರಿಯಾಗಿದ್ದಾರೆ. ಆದ್ರೆ ಮೋದಿ ಅವ್ರು ಅನುಕಂಪದ ಆಧಾರದ ಮೇಲೆ ಅಲ್ಲ ಅಭಿವೃದ್ಧಿ ಆಧಾರದ ಮೇಲೆ ಪ್ರಧಾನಿ ಆದವ್ರು. ಇಲ್ಲಿವರೆಗೂ ಯಾವುದೇ ಭ್ರಷ್ಟಾಚಾರ ಮಾಡದೇ ಆಡಳಿತ ನಡೆಸುತ್ತಿದ್ದಾರೆ.