ಬೆಂಗಳೂರು: ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಆ್ಯಕ್ಟಿವೇಟ್ ಮಾಡುವ ಗಡುವನ್ನು ಇಪಿಎಫ್ಒ (EPFO) ಮತ್ತೆ ವಿಸ್ತರಣೆ ಮಾಡಿದೆ. ಫೆಬ್ರವರಿ 15ರವರೆಗೆ ಯುಎಎನ್ ಆ್ಯಕ್ಟಿವೇಟ್ ಮಾಡಲು ಗಡುವು ನೀಡಲಾಗಿತ್ತು. ಈಗ ಹೆಚ್ಚಿನ ಜನ ಆ್ಯಕ್ಟಿವೇಟ್ ಮಾಡದ ಕಾರಣ ಇಪಿಎಫ್ಒ ಮತ್ತೆ ಗಡುವನ್ನು ಮಾರ್ಚ್ 15ರವರೆಗೆ ವಿಸ್ತರಣೆ ಮಾಡಿದೆ. ಇದರಿಂದಾಗಿ ಇಪಿಎಫ್ಒ ಸದಸ್ಯರಿಗೆ ಹೆಚ್ಚಿನ ಸಮಯ ಸಿಕ್ಕಂತಾಗಿದೆ.
ಯುಎಎನ್ ಆ್ಯಕ್ಟಿವೇಟ್ ಮಾಡುವುದು, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುವುದರ ಡೆಡ್ ಲೈನ್ ಅನ್ನು ಕೂಡ ಇಪಿಎಫ್ಒ ಮುಂದೂಡಿಕೆ. ಇದರ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡುವುದು ಸೇರಿ ಹಲವು ಸೌಲಭ್ಯಗಳನ್ನು ಪಡೆಯಲು ಯುಎಎನ್ ಆ್ಯಕ್ಟಿವೇಟ್ ಮಾಡುವುದು ಅಗತ್ಯವಾಗಿದೆ.
ಹೊಸದಾಗಿ ಉದ್ಯೋಗಕ್ಕೆ ಸೇರಿದವರಿಗೆ ಸಬ್ಸಿಡಿ ನೀಡುವ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್ಐ) ಯೋಜನೆಯ ಲಾಭವನ್ನು ಕೂಡ ಯುಎಎನ್ ಆ್ಯಕ್ಟಿವೇಟ್ ಹಾಗೂ ಆಧಾರ್ ಜೋಡಣೆ ಮೂಲಕ ಪಡೆಯಬಹುದಾಗಿದೆ.
ಯುಎಎನ್ ಸಕ್ರಿಯಗೊಳಿಸುವುದು ಹೇಗೆ?
-ಇಪಿಎಫ್ಒದ epfindia.gov.in ಗೆ ಭೇಟಿ ನೀಡಬೇಕು
- ಬಳಿಕ For Employees ಮೇಲೆ ಕ್ಲಿಕ್ ಮಾಡಿ
- ಮೆಂಬರ್ ಯುಎಎನ್ ಆನ್ ಲೈನ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ
- ಆಕ್ಟಿವ್ ಯುಎಎನ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಕೇಳಿದ ಎಲ್ಲ ಮಾಹಿತಿ ಒದಗಿಸಬೇಕು
- ಎಲ್ಲ ಮಾಹಿತಿ ನೀಡಿದ ಬಳಿಕ Get Authorization Pin ಮೇಲೆ ಕ್ಲಿಕ್ ಮಾಡಿ
- ಮೊಬೈಲ್ ನಂಬರ್ ಗೆ ಬಂದ ಒಟಿಪಿ ನಮೂದಿಸಿ, ಸಬ್ ಮಿಟ್ ಮೇಲೆ ಕ್ಲಿಕ್ ಮಾಡಿ
ಇಷ್ಟೆಲ್ಲ ಪ್ರಕ್ರಿಯೆ ಬಳಿಕ ಯುಎಎನ್ ಆ್ಯಕ್ಟಿವ್ ಆಗುತ್ತದೆ