ಬೆಂಗಳೂರು : ಸರ್ಕಾರದ ನಿವೃತ್ತ ನೌಕರರಿಗೆ ಪಿಂಚಣಿಯೇ ಜೀವನಾಧಾರವಾಗಿರುತ್ತದೆ. ಹಾಗಾಗಿ, ಪಿಂಚಣಿದಾರರು ಪ್ರತಿ ವರ್ಷ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, ಅವರಿಗೆ ಮಾಸಿಕ ಪಿಂಚಣಿ ಜಮೆಯಾಗುವುದಿಲ್ಲ. ಇನ್ನು, ಪಿಂಚಣಿದಾರರು ಇಪಿಎಫ್ಒ ಕಚೇರಿಗಳಿಗೆ ತೆರಳಿ ಜೀವನ ಪ್ರಮಾಣಪತ್ರ ಸಲ್ಲಿಸಲು ಆಗದಿದ್ದರೆ, ಅವರಿಗೆ ಇನ್ನುಮುಂದೆ ಮನೆಬಾಗಿಲಿಗೇ ಸೇವೆ ದೊರೆಯಲಿದೆ.
ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಸಹಯೋಗದಲ್ಲಿ ಪಿಂಚಣಿದಾರರ ಮನೆಗಳಿಗೆ ತೆರಳಿ, ಆನ್ ಲೈನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಪಿಂಚಣಿದಾರರು ಈಗ ಮನೆಯಿಂದಲೇ ಈ ಸೇವೆಯನ್ನು ಪಡೆಯಬಹುದಾಗಿದೆ.
ಪಿಂಚಣಿದಾರರ ಮನೆಗೆ ಬರುವ ಸಿಬ್ಬಂದಿಯು ಆಧಾರ್ ಹಾಗೂ ಬಯೋ ಮೆಟ್ರಿಕ್ ಒಳಗೊಂಡ ಇಡೀ ಪ್ರಕ್ರಿಯೆ ಮುಗಿಸಲಿದ್ದಾರೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿವೃತ್ತ ನೌಕರರು ಮನೆಯಿಂದಲೇ ಪ್ರಮುಖ ಸೇವೆ ಪಡೆಯಲಿದ್ದಾರೆ.
ಸೇವೆ ಪಡೆಯೋದು ಹೇಗೆ?
ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿವೃತ್ತ ನೌಕರರು ಸುಲಭವಾಗಿ ಜೀವನ ಪ್ರಮಾಣಪತ್ರ ಸೇವೆಯನ್ನು ಮನೆಯಿಂದಲೇ ಪಡೆಯಬಹುದಾಗಿದೆ. ಪಿಂಚಣಿದಾರರು ಮೊದಲಿಗೆ 033-22029000 ಸಂಖ್ಯೆಗೆ ಕರೆ ಮಾಡಬೇಕು. ನಿಮ್ಮ ಮನೆಯ ವಿಳಾಸ, ಸಂಪರ್ಕ ಸಂಖ್ಯೆ ನೀಡಬೇಕು. ಇದಾದ ಬಳಿಕ ಐಪಿಪಿಬಿ ಸಿಬ್ಬಂದಿಯು ನಿಮ್ಮ ಮನೆಗೆ ಆಗಮಿಸಲಿದ್ದಾರೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ?
ಜೀವನ್ ಪ್ರಮಾಣ ಪೋರ್ಟಲ್ ಆಗಿರುವ (https://jeevanpramaan.gov.in/v1.0/ppouser/login) ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಮುಖದ ದೃಢೀಕರಣ: UIDAI ಆಧಾರ್ ಆಧಾರಿತ ಮುಖದ ದೃಢೀಕರಣ ತಂತ್ರಜ್ಞಾನವನ್ನು ಬಳಸಿ ಮನೆಯಲ್ಲೇ ಕುಳಿತು ಸಲ್ಲಿಸಬಹುದು. ಮೊಬೈಲ್ ಅಪ್ಲಿಕೇಶನ್: ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಿರುವ ಜೀವನ್ ಪ್ರಮಾಣ ಫೇಸ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು
ಇದನ್ನೂ ಓದಿ : ಭಾರತೀಯ ವಾಯುಪಡೆಯಲ್ಲಿ ‘ಅಗ್ನಿವೀರ್ ವಾಯು’ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ



















